ಕಡಬ : ಕೆಲವು ದಿನಗಳ ಹಿಂದೆ ನಿಧನ ಹೊಂದಿದ ಹರಿಹರ ಸಿ.ಎ. ಬ್ಯಾಂಕ್‌ನ ಮಾಜಿ ಅಧ್ಯಕ್ಷ, ಹಿರಿಯ ಸಾಮಾಜಿಕ ಮುಂದಾಳು ಬಾಳುಗೋಡಿನ ಕಿರಿಭಾಗ ಬಾಲಕೃಷ್ಣ ಗೌಡರಿಗೆ ಶ್ರದ್ಧಾಂಜಲಿ ಸಭೆ ಜರಗಿತು.
ಸಭೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಹರಿಹರ ಗ್ರಾ.ಪಂ. ನ ಮಾಜಿ ಸದಸ್ಯ ಸುಂದರ ಗೌಡ ಮಚ್ಚಾರ ಅವರು, ಎಳೆವೆಯಲ್ಲಿಯೇ ತಂದೆಯನ್ನು ಕಳೆದುಕೊಂಡ ಬಾಲಕೃಷ್ಣ ಗೌಡರು ತಾಯಿಯ ಪೋಷಣೆಯಲ್ಲಿ ಬೆಳೆದು ಸಹೋ ದರನೊಂದಿಗೆ ಶ್ರಮಜೀವಿಯಾಗಿ ಕೆಲಸ ಮಾಡಿ ಮೇಲಕ್ಕೆ ಬಂದವರು. ಸ್ಥಳೀಯ ಯುವಕರನ್ನು ಒಗ್ಗೂಡಿಸಿ ಯುವಕ ಮಂಡಲ ಸ್ಥಾಪಿಸಿ ಸಮರ್ಥ ಸಂಘಟಕನಾಗಿ ಮೂಡಿಬಂದು, ಮುಂದೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಜನಾನುರಾಗಿಯಾಗಿ ಜೀವನ ಮಾಡಿದರು ಎಂದರು.
ನಿವೃತ್ತ ಮುಖ್ಯಶಿಕ್ಷಕ, ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವ ಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಅವರು ಮಾತನಾಡಿ, ಬಾಲಕೃಷ್ಣ ಗೌಡರು ಬದುಕಿದ ಪರೋಪಕಾರಿ ಮನೋಭಾವದ ಜೀವನಶೈಲಿ ಅವರ ಕಾಲಾನಂತರವೂ ಅವರನ್ನು ಜನರು ನೆನಪಿಸಿಕೊಳ್ಳುವಂತೆ ಮಾಡಿದೆ ಎಂದರು.
ಗ್ರಾ.ಪಂ. ಅಧ್ಯಕ್ಷ ಹಿಮ್ಮತ್ ಕೆ.ಸಿ. ಮಾತನಾಡಿದರು. ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾಪ್ರಸಾದ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ.ಪಂ. ಮಾಜಿ ಸದಸ್ಯ ಭರತ್ ಮುಂಡೋಡಿ, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್, ತಾ.ಪಂ. ಸದಸ್ಯ ಉದಯಕುಮಾರ್ ಕೊಪ್ಪಡ್ಕ, ಪ್ರಮುಖರಾದ ಎನ್.ಎ. ರಾಮಚಂದ್ರ, ಎ.ವಿ. ತೀರ್ಥರಾಮ, ಮೋಹನ್‌ರಾಮ್ ಸುಳ್ಳಿ, ದಿನೇಶ್ ಮಡಪ್ಪಾಡಿ, ಜಿನ್ನಪ್ಪ ಗೌಡ, ಕೆ.ಪಿ. ಗಿರಿಧರ್ ಕೊಲ್ಲಮೊಗ್ರ, ಬೆಳಿಯಪ್ಪ ಗೌಡ ಕರ್ತಲಕಜೆ, ಸುಧೀರ್ ಕೂಜುಗೋಡು, ರಾಮಚಂದ್ರ ಗೌಡ, ಶಶಿಧರ ಪಲಂಗಾಯ, ರಾಮಕೃಷ್ಣ ಗೌಡ, ಕೋಟೆ ಸೋಮಸುಂದರ, ಪದ್ಮಯ್ಯ ಮಾಸ್ತರ್, ನಳಿನ್ ಕುಮಾರ್ ಕೊಡ್ತಗುಳಿ, ದಿನೇಶ್ ಮಡ್ತಿಲ, ಪಿ.ಸಿ. ಜಯರಾಮ, ಚಂದ್ರಾ ಕೋಲ್ಚಾರ್, ಕೃಷ್ಣಪ್ಪ ಗೌಡ ಕೊಡ್ತಗುಳಿ, ದೇವರಾಜ ಕಳಿಗೆ, ಮಹಾಬಲ ಗೌಡ, ಸತೀಶ ಕೂಜುಗೋಡು, ಡಾ| ದಾಮೋದರ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.