Advertisement
ಎಂಬಿಬಿಎಸ್ ನಂತರದಲ್ಲಿ ಎಂಡಿ, ಎಂಎಸ್‌ಗೆ ಸಮಾನವಾದ ಕೋರ್ಸ್ ಇದಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಪದವಿ ಮನ್ನಣೆ ಪಡೆದಿದೆ ಎಂದರು. ರಾಜ್ಯದಲ್ಲಿ ಬೆಂಗಳೂರಿನ ಫೋರ್ಟಿಸ್, ಅಪೋಲೊ ಹಾಗೂ ನಾರಾಯಣ ಹೃದಯಾಲಯ ಬಿಟ್ಟರೆ ಇಂತಹ ಸೌಲಭ್ಯದ ಉತ್ತರ ಕರ್ನಾಟಕದ ಮೊದಲ ಆಸ್ಪತ್ರೆ ನಮ್ಮದಾಗಿದೆ.
Related Articles
Advertisement
ಮೂರು ಕೋರ್ಸ್‌ಗಳಿಗೆ ತಲಾ 20 ವಿದ್ಯಾರ್ಥಿಗಳಂತೆ ಒಟು 60 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಅನುಮತಿ ಸಿಕ್ಕಿದೆ. ಇದರಲ್ಲಿ ಶೇ. 20ರಷ್ಟು ಸ್ಥಾನಗಳು ಸರಕಾರಿ ಕೋಟಾದಡಿ ಭರ್ತಿ ಆಗುತ್ತಿದ್ದು, ಉಳಿದ ಸ್ಥಾನಗಳಿಗಾಗಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ದೇಣಿಗೆ ಇರುವುದಿಲ್ಲ.
ಸರಕಾರ ನಿಗದಿಪಡಿಸುವ ಶುಲ್ಕ ಪಡೆಯಲಾಗುವುದು ಎಂದರು. ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಮೂರು ವರ್ಷ, ದ್ವಿತೀಯ ಪಿಯು ಮುಗಿಸಿದ ವಿದ್ಯಾರ್ಥಿಗಳಿಗೆ ಎರಡು ವರ್ಷದ ಕೋರ್ಸ್ ಇದಾಗಿದೆ. ಪ್ರಸಕ್ತ ವರ್ಷ ಬಾಲಾಜಿ ಆಸ್ಪತ್ರೆಯಲ್ಲಿಯೇ ತರಗತಿ ಆರಂಭವಾಗುತ್ತಿದ್ದು, ಅಗತ್ಯ ತರಗತಿ ಕೋಣೆಗಳನ್ನು ರೂಪಿಸಲಾಗುವುದು.
ನವೆಂಬರ್‌ನಿಂದ ತರಗತಿಗಳು ಆರಂಭವಾಗಲಿವೆ ಎಂದರು. ಬಾಲಾಜಿ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋ ಸಾಯಿನ್ಸ್ ಆ್ಯಂಡ್ ಟ್ರಾಮಾ ಕೇಂದ್ರಕ್ಕೆ ಪ್ರಸಕ್ತ ವರ್ಷ ಪ್ರತಿಷ್ಠಿತ ಎನ್‌ಎಬಿಎಚ್ ಸೇಫ್ ಐ ಪ್ರಮಾಣಪತ್ರ ಲಭಿಸಿದೆ. ಸುಮಾರು 300 ಮಾನದಂಡಗಳಡಿ ಪರೀಕ್ಷಿಸಿ ಪರಿಶೀಲಿಸಿ ಇದನ್ನು ನೀಡಲಾಗುತ್ತದೆ ಎಂದರು.
ಬಾಲಾಜಿ ನರರೋಗ ಚಿಕಿತ್ಸೆ ಆಸ್ಪತ್ರೆಯಲ್ಲಿ ಬಾಲಾಜಿ ಹೃದಯಾಲಯಕ್ಕೆ ಸ್ಥಳಾವಕಾಶ ನೀಡಿದ್ದೇವೆ. ಅದರ ನಿರ್ವಹಣೆ ಡಾ| ಸುರೇಶ, ಡಾ| ನಿತಿನ್ ಅವರದ್ದಾಗಿದೆ. ಅಲ್ಲಿ ಯಾರಾದರು ರೋಗಿಗಳಿಗೆ ತೊಂದರೆ ಆಗಿದ್ದರೆ ಅಲ್ಲಿನ ವೈದ್ಯರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಬಾಲಾಜಿ ನರರೋಗ ಚಿಕಿತ್ಸಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಪಾರದರ್ಶಕತೆಗೆ ಒತ್ತು ನೀಡಲಾಗುತ್ತದೆ. ಸಹಜವಾಗಿ ಶೇ. 90ರಷ್ಟು ರೋಗಿಗಳು ತುರ್ತು ಸ್ಥಿತಿಯಲ್ಲಿ ಚಿಕಿತ್ಸೆಗೆ ಬರುತ್ತಿರುವುದರಿಂದ ಚಿಕಿತ್ಸೆ ಫಲಿಸದೆ ಸಾವು ಸಂಭವಿಸುವುದರಿಂದ ಕೆಲವರಿಗೆ ಅಸಮಾಧಾನ ಉಂಟಾಗಿರಬಹುದು ಎಂದರು. ಡಾ| ದೀಪಕ್, ಡಾ| ವಿಜಯ ಯಲಿವಾಳ, ಆಸ್ಪತ್ರೆ ಆಡಳಿತಾಧಿಕಾರಿ ಕರ್ನಲ್ ನಾತು ಇದ್ದರು.