Advertisement

ಕ್ವಾರಂಟೈನ್‌ನಲ್ಲಿದ್ದವರಿಗೆ ಆರೋಗ್ಯ ಜಾಗೃತಿ

12:28 PM May 21, 2020 | Naveen |

ಬಳಗಾನೂರು: ಪಟ್ಟಣದ ಡಾ| ಬಿ.ಆರ್‌ ಅಂಬೇಡ್ಕರ್‌ ಬಾಲಕರ ವಸತಿ ನಿಲಯದಲ್ಲಿ ಕ್ವಾರಂಟೈನ್‌ಲ್ಲಿ ಇರುವವರಿಗೆ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ದೌಲಸಾಬ್‌ ಮುದ್ದಾಪುರ ಹಾಗೂ ಪೋತ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ್‌ ಕೋವಿಡ್‌-19 ಕುರಿತು ವಿವಿಧ ಆರೋಗ್ಯ ಸಲಹೆ ನೀಡಿದರು.

Advertisement

ನಂತರ ಮಾತನಾಡಿದ ವೈದ್ಯಾಧಿಕಾರಿಗಳು, ಕೋವಿಡ್‌ ರೋಗ ಸಾಂಕ್ರಾಮಿಕವಾಗಿದೆ. ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಭೇದಿ ಈ ರೋಗದ ಲಕ್ಷಣಗಳು. ಕ್ವಾರಂಟೈನ್‌ ನಲ್ಲಿ ಇರುವವರಿಗೆ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದರು.

ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ್‌ ಮಾತನಾಡಿ, ರೋಗದ ಬಗ್ಗೆ ಭಯ ಬೇಡ; ಅದರ ಬದಲು ಮುಂಜಾಗ್ರತೆ ಅವಶ್ಯ. ಸೋಂಕಿತರು ಕೆಮ್ಮಿದಾಗ-ಸೀನಿದಾಗ ವೈರಸ್‌ ಹರಡುತ್ತವೆ. ಆದ್ದರಿಂದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ನಿಂದ ಕೈತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅವಶ್ಯ ಎಂದರು. ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕಿಯರಾದ ಲಕ್ಷ್ಮೀ ಬುಳ್ಲಾಪುರ, ಸಹಾಯಕರಾದ ಪ್ರಕಾಶ ನಾಯಕ, ವಸತಿ ನಿಲಯದ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next