Advertisement
ಜನವರಿ ಅಂತ್ಯದಲ್ಲಿ ಭತ್ತ ನಾಟಿ ಮಾಡಿದರೆ ಬೆಳೆ ಕಾಳು ಕಟ್ಟುವ ಹಂತದಲ್ಲಿ ಅಂದರೆ ಮಾರ್ಚ್‌ನಲ್ಲಿ ನೀರಿನ ಕೊರತೆ ಎದುರಾಗಬಹುದೆಂಬ ಆತಂಕದಿಂದ ಬಳಗಾನೂರು ಸೇರಿ ಸುತ್ತಲಿನ ಗ್ರಾಮಗಳ ಬಹುತೇಕ ರೈತರು ಡಿಸೆಂಬರ್ ಕೊನೆ ವಾರ ಮತ್ತು ಜನವರಿ ಮೊದಲ ವಾರದಿಂದಲೇ ಭತ್ತ ನಾಟಿ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ರೈತರು ಭತ್ತ ನಾಟಿ ಮಾಡಿ ಮೊದಲ ಹಂತದ ಗೊಬ್ಬರ ಕೂಡ ಹಾಕಿದ್ದಾರೆ.
ಮಾಡುತ್ತಿದ್ದಾರೆ. ಕೆಲ ರೈತರು ಸಸಿ ಮಡಿಗಳನ್ನು ಹಾಕಿದ್ದು, ನಾಟಿಗೆ ಸಿದ್ಧತೆ ನಡೆಸಿದ್ದಾರೆ. ಮತ್ತೇ ಕೆಲ ರೈತರು ಬೇರೆಡೆಯಿಂದ ಭತ್ತದ ಸಸಿ ತಂದು ನಾಟಿ ಮಾಡುತ್ತಿದ್ದಾರೆ. ಕೆಲವೆಡೆ ಈಗಾಗಲೇ ಭತ್ತ, ತೊಗರಿ, ಜೋಳ, ಕಡ್ಲಿ ಕಟಾವಿಗೆ ಬಂದಿರುವ ಹಿನ್ನೆಲೆಯಲ್ಲಿ ಭತ್ತ ನಾಟಿಗೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಹೀಗಾಗಿ ಬೇರೆ ಗ್ರಾಮಗಳಿಂದ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬಂದು ಭತ್ತ ನಾಟಿ ಮಾಡುತ್ತಿದ್ದಾರೆ. ಕೆಲ ಕೂಲಿ ಕಾರ್ಮಿಕರು ಎಕರೆಗೆ ಇಂತಿಷ್ಟು ಅಂತ ಗುತ್ತಿಗೆ ಪಡೆದು ಭತ್ತ ನಾಟಿ ಮಾಡಿಕೊಡುತ್ತಿದ್ದಾರೆ.