Advertisement

ಬಳಗಾನೂರು: ನಿದ್ದೆಗೆಟ್ಟು ಕೆರೆ ತುಂಬಿಸಿದ ಪ.ಪಂ ಮುಖ್ಯಾಧಿಕಾರಿ ಕಳಕಮಲ್ಲೇಶ ಗರಡಿ ತಂಡ

10:58 AM Jun 20, 2024 | Team Udayavani |

ಬಳಗಾನೂರು: ರಾಯಚೂರು ಸೇರಿ ಇತರೆ ಜಿಲ್ಲೆಗಳಿಗೆ ನೀರಿನ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ತುಂಗಭದ್ರ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಯ ನೀರು ಹರಿಸಲಾಗುತ್ತಿದ್ದು. ಈ ಹಿನ್ನಲೆಯುಲ್ಲಿ ಪಪಂ ವ್ಯಾಪ್ತಿಯ ನಾರಾಯಣ ನಗರಕ್ಯಾಂಪಿನ ಕೆರ ತುಂಬಿಸಲು ನಾಲೆಯ 65 ನೇ ಡಿಸ್ಟಿಬ್ಯೂಟರನಿಂದ ನೀರು ಹರಿಸಿ ಕೆರೆ ತುಂಬಿಸುವ ಹಿನ್ನಲೆಯಲ್ಲಿ ಪ.ಪಂ ಮುಖ್ಯಾಧಿಕಾರಿ ಕಳಕಮಲ್ಲೇಶ ಗರಡಿ ತಂಡ ಯೋಜನೆ ರೂಪಿಸಿ ಕೆಲಸ ಆರಂಭಿಸಿದ ಸ್ಥಳಕ್ಕೆ ಜಿಲ್ಲಾ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರು ಭೇಟಿ ನೀಡಿ ಪರೀಶಿಲಿಸಿದರು.

Advertisement

ನಂತರ ಮಾತನಾಡಿದ ಅವರು ಕೆರೆ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ, ಜನತೆಗೆ ಕುಡಿಯುವ ನೀರೀನ ಅಭಾವವಾಗದಂತೆ ಮುನ್ನೆಚ್ಚರಿಕೆ ವಹಿಸಿ. ಕರ್ತವ್ಯದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ಪಪಂ ಮುಖ್ಯಾಧಿಕಾರಿ ಕಳಕಮಲ್ಲೇಶ ಗರಡಿ ಸೇರಿ ಪಪಂ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯ ನಿಷ್ಠೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ಅಧಿಕಾರಿಗಳ ಆದೇಶದಂತೆ ಪಪಂ ಮುಖ್ಯಾಧಿಕಾರಿ ಗರಡಿ ತಂಡ ಬುಧುವಾರ ರಾತ್ರಿ ನಾರಾಯಣನಗರ ಕ್ಯಾಂಪ್ ಕೆರೆಯನ್ನು ನಿದ್ದೆಗೆಟ್ಟು ತುಂಬಿಸಿದ್ದಾರೆ. ಕಾಲುವೆಗೆ ನೀರುಹರಿ ಬಿಡುತಿದ್ದಂತೆ ಕ್ಯಾಂಪಿನ ಜನತೆಯ ಸಹಕಾರದೊಂದಿಗೆ ತ್ಯಾಜ್ಯವನ್ನು ತರೆವು ಗೊಳಿಸುತ್ತ ಸುಮಾರು 4-5 ಕೀಲೋಮೀಟರ್ ಕಾಲುವೆ ಮೂಲಕ ನೀರು ಹರಿಸುತ್ತ ಕರೆ ತುಂಬಿಸಿದ್ದಾರೆ. ಕ್ಯಾಂಪಿನ ಜನತೆಗೆ ಸುಮಾರು 4-5 ತಿಂಗಳು ನೀರಿನ ಕೊರತೆಯಾಗದಂತೆ ನೀಗಿಸಬಹುದಾಗಿದೆ.

ಈ ಸಂದರ್ಭದಲ್ಲಿ ಸಂಜಯಕುಮಾರಜೈನ್, ತಿಪ್ಪಣ್ಣ, ಸೇರಿದಂತೆ ಕ್ಯಾಂಪಿನ ಮುಖಂಡರು, ಪಪಂ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next