Advertisement
ಮಂಗಳೂರು ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಭರವಸೆ ನೀಡಿದ್ದ ಯು.ಟಿ.ಖಾದರ್ ಅವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 198 ಕೋ. ರೂ. ಅನುದಾನದ ಈ ಯೋಜನೆಗೆ 2019ರಲ್ಲಿ ಚಾಲನೆ ನೀಡಲಾಗಿತ್ತು.
ಉಳ್ಳಾಲ ನಗರಸಭೆಯ ಕಾಮಗಾರಿಯೊಂದಿಗೆ ಸೋಮೇಶ್ವರ ಮತ್ತು ಕೋಟೆಕಾರು ನಗರಾಡಳಿತ ಪ್ರದೇಶಗಳಿಗೆ ಈಗಾಗಲೇ ಅಮೃತ್ ಯೋಜನೆ 2ರಡಿ ಅನುದಾನ ಬಿಡುಗಡೆಯಾಗಿದ್ದು, ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ. ಉಳ್ಳಾಲ ನಗರಸಭೆಗೆ 70 ಕೋ. ರೂ., ಸೋಮೇಶ್ವರ ಪುರಸಭೆಗೆ 55.6 ಕೋ.ರೂ., ಕೋಟೆಕಾರು ಪಟ್ಟಣ ಪಂಚಾಯತ್‌ಗೆ 37 ಕೋ. ರೂ.ಅನುದಾನ ಬಿಡುಗಡೆಯಾಗಿದ್ದು, ಮುಂದಿನ ಆರು ತಿಂಗಳ ಒಳಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳಲಿದೆ.
Related Articles
ಉಳ್ಳಾಲ ತಾಲೂಕು ಹಾಗೂ ಬಂಟ್ವಾಳ ತಾಲೂ ಕಿನ ಕೆಲವು ಗ್ರಾಮಗಳು ಈ ಯೋಜನೆಯ ಲಾಭ ಪಡೆಯಲಿದೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ನೀರು ಸರಬರಾಜಿಗೆ ಎರಡನೇ ಹಂತದ ಕಾಮಗಾರಿ ಆರಂಭಗೊಳ್ಳಲಿದೆ. ಯೋಜನೆ ಪೂರ್ತಿಯಾದರೆ ಜನರಿಗೆ ತುಂಬಾ ಅನುಕೂಲ ಆಗಲಿದೆ.
Advertisement
ಉಳ್ಳಾಲ ನಗರಸಭೆ ವ್ಯಾಪ್ತಿಯ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರಿನ ಸರಬರಾಜಿಗೆ ಮುಡಿಪುನಲ್ಲಿರುವ 6ಎಂಎಲ್ (60 ಲಕ್ಷ ಲೀಟರ್) ಟ್ರೀಟ್‌ಮೆಂಟ್ ಪ್ಲ್ರಾಂಟ್‌ನಿಂದ ಚೆಂಬುಗುಡ್ಡೆಯಲ್ಲಿರುವ 16 ಎಂಎಲ್‌ಡಿ ನೀರಿನ ಟ್ಯಾಂಕ್‌ಗೆ ಪ್ರಾಯೋಗಿಕ ಚಾಲನೆಯ ಬಳಿಕ ನೀರಿನ ಸ್ಯಾಂಪಲನ್ನು ಲ್ಯಾಬ್‌ನಲ್ಲಿ ಹಲವು ಬಾರಿ ಪರೀಕ್ಷೆ ನಡೆಸಿದ ಬಳಿಕ ಜನರಿಗೆ ಪೂರೈಕೆ ಮಾಡಲಾಗುತ್ತದೆ.– ಶೋಭಾಲಕ್ಷ್ಮೀ, ಸಹಾಯಕ ಅಭಿಯಂತರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ