Advertisement

ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ

03:52 PM Aug 14, 2019 | Naveen |

ಬಳಗಾನೂರು: ಅಭಿವೃದ್ಧಿಗಾಗಿ ಬಂದ ಅನುದಾನ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯ. ಈ ದಿಶೆಯಲ್ಲಿ ಸದಸ್ಯರು ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಪಪಂ ಆಡಳಿತಾಧಿಕಾರಿ, ತಹಶೀಲ್ದಾರ್‌ ಬಲರಾಮ ಕಟ್ಟಿಮನಿ ಹೇಳಿದರು.

Advertisement

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡದ ಪಪಂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆ ಆರಂಭವಾಗುತಿದ್ದಂತೆ ಸದಸ್ಯೆ ನೂರಜಹಾಬೇಗಂ ಮಾತನಾಡಿ, ಪಪಂ ವತಿಯಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರಿಂದ ಅಡೆತಡೆಯಾದಾಗ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಆದರೆ ಇಲ್ಲಿನ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಇದರಿಂದ ಗುತ್ತಿಗೆದಾರರು ಕಾಮಗಾರಿ ನಡೆಸಲು ಸಮಸ್ಯೆ ಆಗುತ್ತಿದೆ ಎಂದು ಸಭೆ ಗಮನಕ್ಕೆ ತಂದರು.

ಕಳೆದ ಸಾಲಿನಲ್ಲಿ ಗುತ್ತಿಗೆ ಪಡೆದರೂ ಕಾಮಗಾರಿ ಆರಂಭಿಸದ ಗುತ್ತಿಗೆದಾರರ ಎಫ್‌ಡಿ, ಇಎಂಡಿ ಹಣ ಮುಟ್ಟುಗೋಲು ಹಾಕಿಕೊಂಡು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ 2019-20ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ 97.60 ಲಕ್ಷಕ್ಕೆ ಕ್ರಿಯಾಯೋಜನೆ ಮಂಜೂರಾಗಿದೆ. ಅಂದಾಜು ಪಟ್ಟಿ ತಯಾರಿಸಿ ಆಡಳಿತಾತ್ಮಕ ಅನುಮೋದನೆ ಪಡೆಯಲಾಯಿತು. ಎಸ್‌ಎಫ್‌ಸಿ ಅಭಿವೃದ್ಧಿ ಅನುದಾನ 18.91 ಲಕ್ಷಕ್ಕೆ ಕ್ರಿಯಾಯೋಜನೆ ಮಂಜೂರಾಗಿದ್ದು ಅಂದಾಜುಪಟಇಟ ತಯಾರಿಸಿ ಅನುಮೋದನೆ ಪಡೆಯಲಾಯಿತು. ಶೇ.24.10 ಯೋಜನೆಯಡಿ 19.70 ಲಕ್ಷ ವೆಚ್ಚದ ಕಾಮಗಾರಿಗಳಿಗೆ, ಶೇ.7.25 ಯೋಜನೆಯಡಿ 0.90 ಲಕ್ಷ, ಶೇ.5 ಯೋಜನೆಯಡಿ 0.62 ಲಕ್ಷದ ಕಾಮಗಾರಿಗಳ ಅಂದಾಜು ಪಟ್ಟಿ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಾಯಿತು.

2019-20ನೇ ಸಾಲಿನ ಸಾಮಾನ್ಯ ಅನುದಾನ 14ನೇ ಹಣಕಾಸು ಯೋಜನೆಯಡಿ 16.40 ಲಕ್ಷಕ್ಕೆ, ಶೇ.7.25 ಯೋಜನೆಯಡಿ 1.35 ಲಕ್ಷಕ್ಕೆ, ಹಾಗೂ ಪಪಂ ನಿಧಿಯಲ್ಲಿ 0.44 ಲಕ್ಷಕ್ಕೆ, ಶೇ.5ಯೋಜನೆಯಡಿ 0.93 ಲಕ್ಷಕ್ಕೆ, ಹಾಗೂ ಪಪಂ ನಿಧಿ 0.18 ಲಕ್ಷಕ್ಕೆ, ಶೇ.24.10ಯೋಜನೆಯಡಿ 0.30 ಲಕ್ಷಕ್ಕೆ, ಹಾಗೂ ಪಪಂ ನಿಧಿ 1.45 ಲಕ್ಷಕ್ಕೆ ಹಾಗೂ ಬಾಕಿ ಉಳಿದ 8.52 ಲಕ್ಷಕ್ಕೆ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲು ನಿರ್ಣಯಿಸಲಾಯಿತು.

Advertisement

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕೆರೆ ನಿರ್ಮಾಣ, ಬಸ್‌ ನಿಲ್ದಾಣ, ಚರಂಡಿ ಸ್ವಚ್ಛತೆ ಮತ್ತು ನಿರ್ವಹಣೆ, ಕುಡಿಯುವ ನೀರು ಸರಬರಾಜು, ನಾರಾಯಣ ನಗರ ಕ್ಯಾಂಪ್‌ ರಸ್ತೆ ದುರಸ್ತಿ, ಅಂಗನವಾಡಿ ಕಟ್ಟಡ ನಿರ್ಮಾಣ, ಮಹಿಳೆಯರಿಗೆ ಶೌಚಾಲಯ ನಿರ್ಮಾಣ, ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಕಾಮಗಾರಿ ನನೆಗುದಿಗೆ ಬಿದ್ದಿರುವ ಸದಸ್ಯರು ಸಭೆ ಗಮನಕ್ಕೆ ತಂದರು.

ಮಾರುತಿ ನಗರದಲ್ಲಿನ ಆಸ್ತಿಗಳಿಗೆ ಖಾತಾಉತಾರ ಮತ್ತು ಆಸ್ತಿ ಸಂಖ್ಯೆ ನೀಡುವ ಕುರಿತು, ಇತರೆ ವಾರ್ಡ್‌ಗಳಲ್ಲಿ ಎನ್‌ಎ ಆಗದೆ ಇರುವ ಜಾಗದಲ್ಲಿ ಖಾತೆ ಸಂಖ್ಯೆ ನೀಡುವ ಕುರಿತು ಚರ್ಚಿಸಲಾಯಿತು.

ಸದಸ್ಯರಾದ ವೀರನಗೌಡ, ರಾಜಶೇಖರ, ಮಂಜುನಾಥ, ಮುದುಕಪ್ಪ ಯಂಕಪ್ಪ ನಾಯಕ, ಹನುಮಂತ, ವಿಜಯಲಕ್ಷ್ಮೀ, ಗಂಗಮ್ಮ, ನೂರಜಹಾನ್‌ಬೇಗಂ, ಸತ್ಯವತಿ, ನಾಗಲಕ್ಷ್ಮೀ, ರೇಣುಕಮ್ಮ ಆಡಳಿತಾಧಿಕಾರಿ ಬಲರಾಮ ಕಟ್ಟಿಮನಿ, ಪಪಂ ಮುಖ್ಯಾಧಿಕಾರಿ ಫಿರೋಜ್‌ ಖಾನ್‌, ಉಪ ತಹಶೀಲ್ದಾರ್‌ ನಾಗಲಿಂಗ ಪತ್ತಾರ ಇತರರು ಇದ್ದರು.

ನೆರೆ ಸಂತ್ರಸ್ತರಿಗೆ ನೆರವು: ಸಭೆಯಲ್ಲಿ ನೆರೆ ಸಂತ್ರಸ್ತರ ನೆರವಿಗೆ ಪಪಂ ಸದಸ್ಯರ ಒಂದು ತಿಂಗಳ ಗೌರವಧನವನ್ನು ನೀಡಲು ಸರ್ವ ಸದಸ್ಯರು ಸಮ್ಮತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next