Advertisement

ಬಾಲಬ್ರೂಯಿ ಅತಿಥಿ ಗೃಹ ಕೊರೊನಾ ವಾರ್‌ ರೂಂ

09:30 PM Mar 22, 2020 | Lakshmi GovindaRaj |

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳ ಕೊರೊನಾ ಕ್ರಮಗಳ ಉಸ್ತುವಾರಿ ಕೇಂದ್ರವಾಗಿ (ಕೊರೊನಾ ವಾರ್‌ ರೂಂ) ಬೆಂಗಳೂರಿನ ಅರಮನೆ ರಸ್ತೆಯ ಬಾಲಬ್ರೂಯಿ ಅತಿಥಿ ಗೃಹವನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವ ವಹಿಸುವರು. ಟಾಸ್ಕ್ ಫೋರ್ಸ್‌ ಸಭೆಗಳು, ವಿಡಿಯೋ ಕಾನ್ಫರೆನ್ಸ್‌ಗಳು ಇಲ್ಲಿಯೇ ನಡೆಯುತ್ತವೆ. ಈ ಕೊರೊನಾ ವಾರ್‌ ರೂಂ 24/7 ಕಾರ್ಯ ನಿರ್ವಹಿಸಲಿದೆ.

Advertisement

51 ಪ್ರತ್ಯೇಕ ನಿಗಾ ಜಾರಿ ತಂಡಗಳು: ಬೆಂಗಳೂರಿನಲ್ಲಿ ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿರುವವರು ನಿಯಮ ಪಾಲಿಸದೇ ನಗರದೊಳಗೆ ಮುಕ್ತವಾಗಿ ಸುತ್ತಾಡುತ್ತಿದ್ದಾರೆಂಬ ದೂರುಗಳು ಆರೋಗ್ಯ ಸಹಾಯವಾಣಿಗೆ ಹೆಚ್ಚಳವಾಗಿವೆ. ಈ ಹಿನ್ನೆಲೆ ಅಂಬುಲೆನ್ಸ್‌ , ಒಬ್ಬ ಆಯುಷ್‌ ವೈದ್ಯ, ವೈರ್‌ಲೆಸ್‌ ಸೆಟ್‌ ಹೊಂದಿರುವ ಪೊಲೀಸ್‌ ಸಿಬ್ಬಂದಿ ಒಳಗೊಂಡಂತೆ 51ಪ್ರತ್ಯೇಕ ನಿಗಾ ಜಾರಿ ತಂಡಗಳನ್ನು ಸಿದ್ಧಪಡಿಸಲಾಗಿದೆ.

ಈ ತಂಡವು ದೂರುಗಳನ್ನು ಆಧರಿಸಿ ಸ್ಥಳಕ್ಕೆ ತೆರಳಿ ಪ್ರತ್ಯೇಕ ನಿಗಾ ಇರದೆ ತಿರುಗಾಡುತ್ತಿರುವ ವ್ಯಕ್ತಿಯನ್ನು ಹಿಡಿಯುತ್ತಾರೆ. ಬಳಿಕ ಹತ್ತಿರದ ಪೊಲೀಸ್‌ ಠಾಣೆಯಲ್ಲಿ ಆಯುಷ್‌ ವೈದ್ಯರು ಆ ವ್ಯಕ್ತಿ ವಿರುದ್ದ ದೂರು ನೀಡಿ, ಪ್ರತ್ಯೇಕ ನಿಗಾ ಘಟಕಕ್ಕೆ ಕರೆದೊಯ್ದು, 14 ದಿನ ಪೂರೈಸುವವರೆಗೂ ಇಡಲಾಗುತ್ತದೆ.

ಹೋಟೆಲ್‌ನಲ್ಲಿರುವವರು ಇಲಾಖೆ ನಿಗಾ ಕೇಂದ್ರಕ್ಕೆ: ದೇಶ-ವಿದೇಶಗಳಿಂದ ಬೆಂಗಳೂರಿಗೆ ಬಂದು ಸಂಚಾರ, ವಸತಿ ಸೌಲಭ್ಯವಿಲ್ಲದೆ, ಬೇರೆಡೆ ತೆರಳಲು ಸಾಧ್ಯವಾಗದೇ ನಗರದ ಹೋಟೆಲ್‌, ಹಾಸ್ಟೆಲ್‌ ಹಾಗೂ ಪಿಜಿಗಳಲ್ಲಿ ಪ್ರತ್ಯೇಕ ನಿಗಾದಲ್ಲಿರುವವರನ್ನು ಭಾನುವಾರದಿಂದಲೇ ಆರೋಗ್ಯ ಇಲಾಖೆ ನಿಯೋಜಿಸಿರುವ ಸಾರ್ವಜನಿಕ ಪ್ರತ್ಯೇಕ ನಿಗಾ ಕೇಂದ್ರಗಳಿಗೆ ಸ್ಥಳಾಂತರಿಸಲು ಕ್ರಮಕೊಳ್ಳಲಾಗಿದೆ.

ಇತರೆ ಪ್ರಮುಖ ಕ್ರಮಗಳು
* ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ದೇಶಿ ವಿಮಾನ ನಿಲ್ದಾಣಗಳಿಂದ (ಡೊಮೆಸ್ಟಿಕ್‌) ಬರುವ ಪ್ರಯಾಣಿಕರ ತಪಾಸಣೆ.

Advertisement

* ಸದ್ಯ ಕಾರ್ಯನಿರ್ವಹಿಸುತ್ತಿರುವ ಕೊರೊನಾ ಸೋಂಕು ಪ್ರಯೋಗಾಲಯಗಳ ಕಾರ್ಯ ಪ್ರಮಾಣ ಹೆಚ್ಚಳ.

* ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರ (ರೋಗ ಲಕ್ಷಣ ಇರುವ/ ಇಲ್ಲದಿರುವ) ತಪಾಸಣೆ.

* ಐಸಿಎಂಆರ್‌ ಹಾಗೂ ಎನ್‌ಐವಿ ಸಹಕಾರದಿಂದ ಸರ್ಕಾರಿ ಹಾಗೂ ಸರ್ಕಾರೇತರ ಪ್ರಯೋಗಾಲಯಗಳಿಗೆ ಕೊರೊನಾ ಪರೀಕ್ಷೆ ಪರವಾನಗಿ ಕೊಡಿಸಲು ಕ್ರಮ.

* ಕೋವಿಡ್‌ -19 ಟಾಸ್ಕ್ ಪೊರ್ಸ್‌ಗೆ ಸಹಾಯವಾಗುವ ನಿಟ್ಟಿನಲ್ಲಿ ಐಎಎಸ್‌ ಅಧಿಕಾರಿಗಳನ್ನು ಒಳಗೊಂಡ ತೀವ್ರ ನಿಗ್ರಹ ದಳ ರಚಿಸಲಾಗಿದೆ. ಆಯಾ ಜಿಲ್ಲಾ ತಜ್ಞ ವೈದ್ಯರ ಸಲಹೆ ಸೂಚನೆಯಡಿ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್‌ ಕಾರ್ಯನಿರ್ವಹಣೆಗೆ ಸೂಚನೆ.

Advertisement

Udayavani is now on Telegram. Click here to join our channel and stay updated with the latest news.

Next