Advertisement
ಈದುಲ್ ಅಝಾ ಹಬ್ಬದ ಪ್ರಯುಕ್ತ ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದ ಬಳಿಕ ಅವರು ಮಾತನಾಡಿದರು.
ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಹಬ್ಬಗಳಿರುವುದು ಮನೋರಂಜನೆಗಾಗಿ ಅಲ್ಲ. ಈದುಲ್ ಅಝಾ ತ್ಯಾಗ ಬಲಿದಾನದ ಹಬ್ಬವಾಗಿದ್ದು ಸೌಹಾರ್ದತೆಯಿಂದ ಆಚರಿಸಬೇಕಾಗಿದೆ. ಒಗ್ಗಟ್ಟು ಪ್ರದರ್ಶಿಸಿ ದೇಶ ಅಭಿವೃದ್ಧಿಯ ಕೆಲಸ ನಮ್ಮಿಂದ ಆಗಬೇಕು ಎಂದರು. ಖತೀಬ ಅಬ್ದುಲ್ ಅಝೀಝ್ ಬಾಖವಿ ಈದ್ ಖುತಾ ಮತ್ತು ನಮಾಝ್ ನಿರ್ವಹಿಸಿದರು.
ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತ್ವಾಹ, ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್, ಬಾವಾ ಮುಹಮ್ಮದ್, ಯು.ಕೆ. ಇಲ್ಯಾಸ್, ಯು.ಟಿ. ಇಲ್ಯಾಸ್, ನೌಷಾದ್ ಅಲಿ, ಅಝಾದ್ ಇಸ್ಮಾಯಿಲ್, ಮುಸ್ತಾಫ ಅಬ್ದುಲ್ಲ, ಆಸೀಫ್ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ, ಮುಸ್ತಾಫ ಮಂಚಿಲ, ಅಯ್ಯೂಬ್ ಮಂಚಿಲ, ಮಹಮ್ಮದ್ ಅಳೇಕಲ, ಮೊದಿನಬ್ಬ ಅಝಾದ್ ನಗರ, ಅಬೂಬಕರ್ ಅಲಿ ನಗರ, ಹಮೀದ್ ಯು.ಪಿ. ಅಳೇಕಲ, ಇಬ್ರಾಹಿಂ ಹಾಜಿ ಉಳ್ಳಾಲಬೈಲ್, ಹಮೀದ್ ಕೋಡಿ, ಯೂಸುಫ್, ಅದ್ದಾಂ ಮೇಲಂಗಡಿ, ಕಬೀರ್ ಚಾಯಬ್ಬ, ಆದಂ ಹಾಗೂ ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.