Advertisement

ಬಕ್ರೀದ್‌ ಹಬ್ಬ ಶಾಂತಿಯುತವಾಗಿ ಆಚರಿಸಿ: ಎಸ್‌ಪಿ

03:22 PM Jul 08, 2022 | Team Udayavani |

ಲೋಕಾಪುರ: ಎಲ್ಲ ಸಮಾಜ ಬಾಂಧವರು ಶಾಂತಿ ಸೌಹಾರ್ದತೆಯ ಬದುಕು ನಡೆಸಬೇಕು. ಜನಜೀವನ ನೆಮ್ಮದಿಯನ್ನು ಕಾನೂನು ರೀತಿಯಲ್ಲಿ ಕಾಪಾಡುವುದು ಪೊಲೀಸ್‌ ಇಲಾಖೆ ಕರ್ತವ್ಯ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಬಾಗಲಕೋಟೆ ನೂತನ ಎಸ್‌ಪಿ ಜಯಪ್ರಕಾಶ ಅಕ್ಕರಕಿ ಹೇಳಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಬಕ್ರೀದ್‌ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ನಾನು ಬಾಗಲಕೋಟೆ ನೂತನ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಭೇಟಿ ನೀಡುತ್ತಿರುವ ಮೊದಲ ಪೊಲೀಸ್‌ ಠಾಣೆ ಇದಾಗಿದೆ. ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಅಚರಿಸಲು ಎಲ್ಲ ಸಮುದಾಯದವರು ಕೈ ಜೋಡಿಸಬೇಕು. ಜು. 10ರಂದು ನಡೆಯುವ ಬಕ್ರೀದ್‌ ಆಚರಣೆಯ ವೇಳೆಯಲ್ಲಿ ಪ್ರತಿಯೊಬ್ಬರು ಶಾಂತಿ, ಸೌಹಾ ರ್ದತೆ ಕಾಪಾಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರದ ನಿಯಮ ಕಡ್ಡಾಯ ಪಾಲಿಸಬೇಕಾಗಿದೆ ಎಂದರು.

ಅಂಜುಮನ್‌ -ಎ-ಇಸ್ಲಾಂ ಕಮೀಟಿ ಅಧ್ಯಕ್ಷ ಅಲ್ಲಾಸಾಬ ಯಾದವಾಡ ಮಾತನಾಡಿ, ಸರ್ಕಾರದ ನಿಯಮ ಪಾಲಿಸುವ ಮೂಲಕ ಬಕ್ರೀದ್‌ ಆಚರಿಸಲು ಎಲ್ಲರ ಸಹಕಾರವಿದೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೇ ಕಾನೂನಿನ ನಿಯಮಾವಳಿಗಳಿಗೆ ಧಕ್ಕೆಯಾಗದಂತೆ ಬಕ್ರೀದ್‌ ಆಚರಿಸಲಾಗುವುದು ಎಂದು ಭರವಸೆ ನೀಡಿದರು.

ಸ್ಥಳೀಯ ಮುಖಂಡ ವಸಂತಗೌಡ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಪೂರ್ವಜ ರಿಂದಲೂ ಎಲ್ಲ ಜಾತ್ರೆ ಹಾಗೂ ರಮಜಾನ, ಬಕ್ರೀದ್‌ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಒಗ್ಗೂಡಿ ಆಚರಣೆ ಮಾಡಲಾಗುತ್ತಿದೆ. ಸಭೆ ಸಮಾರಂಭಗಳಲ್ಲಿಯೂ ಕೂಡ ಒಗ್ಗಟ್ಟಾಗಿ ಭಾಗ ವಹಿಸುವ ಮೂಲಕ ಲೋಕಾಪುರ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಸನ್ಮಾನ: ನೂತನ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಪ್ರಥಮ ಬಾರಿಗೆ ಲೋಕಾಪುರ ಪೊಲೀಸ್‌ ಠಾಣೆಗೆ ಆಗಮಿಸಿದ ಜಯಪ್ರಕಾಶ ಅಕ್ಕರಕಿ ಮತ್ತು ಡಿವೈಎಸ್‌ಪಿ ಪಾಂಡುರಂಗಯ್ಯ, ಮುಧೋಳ ನೂತನ ಸಿಪಿಐ ಅಯ್ಯನಗೌಡ ಪಾಟೀಲ ಅವರನ್ನು ಪಟ್ಟಣದ ಮುಖಂಡರು ಸನ್ಮಾನಿಸಿದರು.

Advertisement

ಟ್ರಾಫಿಕ್‌ ನಿವಾರಣೆಗೆ ಎಸ್ಪಿ ಸೂಚನೆ: ಪಟ್ಟಣದಲ್ಲಿ ಶಿಸ್ತು ಬದ್ಧವಾಗಿ ಟ್ರಾಫಿಕ್‌ ನಿವಾರಣೆ ಮಾಡಲಾಗುತ್ತಿದೆ. ಪ್ರತಿದಿನ ರಸ್ತೆಬದಿ ವ್ಯಾಪಾರಿಗಳಿಗೂ ಮತ್ತು ಸಾರ್ವಜನಿಕರಿಗೂ ತೊಂದರೆಯಾಗದಂತೆ ಟ್ರಾಫಿಕ್‌ ನಿವಾರಣೆ ಮಾಡಬೇಕು. ಪ್ರತಿದಿನ ಸಂಜೆ ಜನದಟ್ಟಣೆ ನಿವಾರಣೆ ಇರುವ ಸಿಸಿಟಿವಿ ವಿಡಿಯೋ ದೃಶ್ಯವನ್ನು ನನಗೆ ಕಳುಹಿಸಬೇಕು ಎಂದು ಪಿಎಸ್‌ಐ ಶಿವಶಂಕರ ಮುಕರಿ ಅವರಿಗೆ ಸೂಚಿಸಿದರು.

ಡಿವೈಎಸ್‌ಪಿ ಪಾಂಡುರಂಗಯ್ಯ, ಸಿಪಿಐ ಅಯ್ಯನಗೌಡ ಪಾಟೀಲ, ಪಿಎಸ್‌ಐ ಶಿವಶಂಕರ ಮುಕರಿ, ತಾಪಂ ಮಾಜಿ ಸದಸ್ಯ ರಫೀಕ ಬೈರಕದಾರ, ಯಮನಪ್ಪ ಹೊರಟ್ಟಿ, ವಸಂತಗೌಡ ಪಾಟೀಲ, ಬಿ.ಎಲ್‌. ಬಬಲಾದಿ, ಮಹೇಶ ಹುಗ್ಗಿ, ಆನಂದ ಹವಳಖೋಡ, ಜಾಕೀರ ಅತ್ತಾರ, ಹನಮಂತ ಕುಡಚಿ, ವಿನೋದ ಘೋರ್ಪಡೆ, ಸೈಯದ್‌ ನದಾಫ, ಗುಲಾಬಸಾಬ ಅತ್ತಾರ, ರಮಜಾನ ನದಾಫ, ಸಂತೋಷ ದೇಶಪಾಂಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next