Advertisement

ಅಹ್ಮದಿಯಾ ಮಸೀದಿಯಲ್ಲಿ “ಈದುಲ್‌ ಅಝ್ ಹಾ’

07:45 AM Sep 05, 2017 | Team Udayavani |

ಮಡಿಕೇರಿ: ತ್ಯಾಗ ಬಲಿದಾನಗಳ ಹಬ್ಬವಾದ “ಈದುಲ್‌ ಅಝ್ ಹಾ’ ಪ್ರಯುಕ್ತ ಮಡಿಕೇರಿಯ ಅಹ್ಮದಿಯಾ ಮುಸ್ಲಿಂ ಜಮಾಅತ್‌ನ ಮಸೀದಿಯಲ್ಲಿ ವಿಶೇಷ ನಮಾಝ್ ಹಾಗೂ ಪ್ರಾರ್ಥನೆ ನೆರವೇರಿತು. ಧರ್ಮಗುರುಗಳಾದ ಹಾಫಿಝ್ ರಫೀಕ್‌ ಉಜ್ಜಮಾ ಧಾರ್ಮಿಕ ಪ್ರವಚನ ನೀಡಿದರು.

Advertisement

ಈದುಲ್‌ ಹಬ್ಬವು ಪ್ರವಾದಿ ಇಬ್ರಾಹಿಮ್‌(ಅ) ಹಾಗೂ ಅವರ ಪುತ್ರ ಇಸ್ಮಾಯಿಲ್‌ (ಅ) ಅವರ ತ್ಯಾಗ, ಬಲಿದಾನಗಳ ಪ್ರತೀಕವಾಗಿದೆ. ಈ ಹಬ್ಬವನ್ನು ಬಕ್ರೀದ್‌ ಎಂದು ಕರೆಯಲಾಗುತ್ತಿದ್ದು ಇದು ಹಬ್ಬದ ಆಚರಣೆಗೆ ಸಂಕುಚಿತ ಅರ್ಥ ವನ್ನು ಕಲ್ಪಿಸಿದೆ. ಆದ್ದರಿಂದ ಬಕ್ರೀದ್‌ ಎಂಬ ಹೆಸರನ್ನು ಕೈಬಿಡಬೇಕೆಂದು ಹೇಳಿದರು. ಪವಿತ್ರ ಖುರ್‌ಆನ್‌ಗೆ ವಿರುದ್ಧವಾದ ಯಾವುದೇ ಆಚಾರಗಳಿಗೆ ಇಸ್ಲಾಮ್‌ ಧರ್ಮದಲ್ಲಿ ಸ್ಥಾನವಿಲ್ಲ. ಮೂಢನಂಬಿಕೆ, ಅಂಧಾನುಕರಣೆಗಳನ್ನು ಪವಿತ್ರ ಖುರ್‌ಆನ್‌ ಬಲವಾಗಿ ವಿರೋಧಿಸಿದೆ. ಖುರ್‌ಆನ್‌ನ ವಿಚಾರಧಾರೆಗಳು ವೈಜ್ಞಾನಿಕ ವಾಗಿದ್ದು ಧರ್ಮದ ತಳಹದಿಯೊಂದಿಗೆ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳನ್ನು ಇಸ್ಲಾಮ್‌ ಧರ್ಮ ಪ್ರತಿಪಾದಿಸುತ್ತದೆ ಎಂದರು.
ಜಮಾಅತ್‌ ಅಧ್ಯಕ್ಷರಾದ ಎಂ.ಬಿ. ಝಹೀರ್‌ ಅಹ್ಮದ್‌ ಈ ಸಂದರ್ಭ ಮಾತನಾಡಿದರು.

ಪ್ರಾರ್ಥನೆಯ ಅನಂತರ ಮುಸ್ಲಿಮ್‌ ಬಾಂಧವರು ಪರಸ್ಪರ ಆಲಂಗಿಸಿ ಹಬ್ಬದ ಶುಭಾಶ ಯಗಳನ್ನು ಕೋರಿದರು. ಮಹಿಳೆಯರು, ಮಕ್ಕಳು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next