Advertisement

Bakrid 2024; ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರಿಂದ ಸಾಮೂಹಿಕ ಪ್ರಾರ್ಥನೆ

12:41 PM Jun 17, 2024 | Team Udayavani |

ಹುಬ್ಬಳ್ಳಿ: ಇಲ್ಲಿನ ಕಿತ್ತೂರು ಚೆನ್ನಮ್ಮ ವೃತ್ತ ಬಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಮೌಲಾನಾ ಜಹೀರುದ್ದೀನ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮೊಹಮ್ಮದ ಯುಸೂಫ ಸವಣೂರ, ಅಲ್ತಾಫ ಹಳ್ಳೂರ, ಬಸೀರ ಗೂಡಮಾಲೆ, ಮೆಹಮೂದ ಕೋಳೂರ, ಶಿರಾಜ‌ಅಹ್ಮದ ಕುಡಚಿವಾಲೆ, ಸಲೀಂ ಸುಂಡಕೆ, ಶಾರೂಖಖಾನ ಮುಲ್ಲಾ, ಮಲ್ಲಿಕ ಸಿಕಂದರ, ಕೆ.ಡಿ. ಕಮ್ಮಾರ ಸೇರಿದಂತೆ ಸಾವಿರಾರು ಮುಸ್ಲಿಮರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ನಂತರ ಮುಸ್ಲಿಂ ಸಮುದಾಯದವರು ಎ.ಎಂ. ಹಿಂಡಸಗೇರಿ ಮುಂದಾಳತ್ವದಲ್ಲಿ ಮೂರುಸಾವಿರ ಮಠಕ್ಕೆ ತೆರಳಿ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಭೇಟಿಮಾಡಿ ಹೂವಿನ ಹಾರ ಹಾಕಿ ಗೌರವಿಸಿದರು. ಶ್ರೀಗಳು ಫಲ-ಪುಷ್ಪ ನೀಡಿ ಆಶೀರ್ವದಿಸಿದರು. ಈ ವೇಳೆ ಪರಸ್ಪರರು ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಶ್ರೀಮಠದ ಆಡಳಿತ ಮಂಡಳಿಯ ವಿಜಯ ಶೆಟ್ಟರ, ಮಲ್ಲಿಕಾರ್ಜುನ ಕಳಸರಾಯ, ವೀರೇಶ ಸಂಗಳದ, ಸದಾನಂದ ಡಂಗನವರ, ಸತೀಶ ಮೆಹರವಾಡೆ, ಚನ್ನಬಸಪ್ಪ ಧಾರವಾಡಶೆಟ್ಟರ, ಅಪ್ಪಣ್ಣ ಬೆಂಡಿಗೇರಿ, ನವೀನ ಕುದರಿ ಇತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next