Advertisement

ಬಕಾಸುರ ಮತ್ತು ತಾರಕಾಸುರ

01:13 PM Dec 02, 2017 | |



Advertisement

ಪದ್ಮಾವತಿ ಪಿಕ್ಚರ್ಸ್‌ ಲಾಂಛನದಲ್ಲಿ ರೋಹಿತ್‌ ಹಾಗೂ ತಂಡದವರು ನಿರ್ಮಿಸಿರುವ “ಬಕಾಸುರ’ ಚಿತ್ರದ ಚಿತ್ರೀಕರಣ, ಮಾತಿನ ಜೋಡಣೆ ಮುಕ್ತಾಯವಾಗಿದ್ದು ಪ್ರಥಮ ಪ್ರತಿ ಸಹ ಸಿದ್ದವಾಗಿದೆ. ಚಿತ್ರವನ್ನು ಸದ್ಯದಲ್ಲೇ ಸೆನ್ಸಾರ್‌ ಮಂಡಳಿ ವೀಕ್ಷಿಸಲಿದೆ. 

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ನಾಯಕರಾಗಿ ಆರ್‌.ಜಿ.ರೋಹಿತ್‌ ನಟಿಸಿದ್ದಾರೆ. ಮೊದಲ ಬಾರಿಗೆ ರವಿಚಂದ್ರನ್‌ ಅವರು ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನವನೀತ್‌ ನಿರ್ದೇಶನದ ಈ ಚಿತ್ರಕ್ಕೆ 50 ದಿನಗಳ ಕಾಲ ಕರ್ನಾಟಕ ಹಾಗೂ ಗೋವಾದಲ್ಲಿ ಚಿತ್ರೀಕರಣ ನಡೆದಿದೆ.

ಸೈಕಾಲಜಿ ಥ್ರಿಲ್ಲರ್‌ ಆಧಾರಿತ ಸಿನಿಮಾ ಇದಾಗಿದೆ. ಇನ್ನು, ಓಂ ಬಾಲಾಜಿ ಎಂಟರ್‌ ಪ್ರ„ಸಸ್‌ ಲಾಂಛನದಲ್ಲಿ ಎನ್‌.ನರಸಿಂಹಲು ಅವರು ನಿರ್ಮಿಸುತ್ತಿರುವ “ತಾರಾಕಾಸುರ’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಒಂದು ಹಾಡಿನ ಚಿತ್ರೀಕರಣ ಬಾಕಿಯಿದೆ.

ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಸದ್ಯ ಬಾಲಾಜಿ ಡಿಜಿ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಚಂದ್ರಶೇಖರ್‌ ಬಂಡಿಯಪ್ಪ “ತಾರಾಕಾಸುರ’ ಚಿತ್ರದ ನಿರ್ದೇಶಕರು. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next