Advertisement

ಅಲಿ ಅಲಿಯೆವ್‌ ಕುಸ್ತಿ: ಚಿನ್ನ ಗೆದ್ದ ಭಜರಂಗ್‌

02:58 AM May 04, 2019 | Sriram |

ಕಾಸ್ಪಿಕ್ಸ್‌ (ರಶ್ಯ): ವಿಶ್ವದ ನಂ. ವನ್‌ ಕುಸ್ತಿಪಟು, ಭಾರತದ ಭಜರಂಗ್‌ ಪೂನಿಯಾ ಎರಡು ವಾರಗಳಲ್ಲಿ 2ನೇ ಪ್ರಶಸ್ತಿ ಜಯಿಸಿ ಸಂಭ್ರಮಿಸಿದ್ದಾರೆ

Advertisement

ಶುಕ್ರವಾರ ರಶ್ಯದಲ್ಲಿ ನಡೆದ ಅಲಿ ಅಲಿಯೆವ್‌ ಕುಸ್ತಿ ಕೂಟದ 65 ಕೆಜಿ ವಿಭಾಗದ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಜರಂಗ್‌ ಆತಿಥೇಯ ನಾಡಿನ ಕುಸ್ತಿಪಟು ವಿಕ್ಟರ್‌ ರಸದಿನ್‌ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಪಂದ್ಯದ ಒಂದು ಹಂತದಲ್ಲಿ 0-5 ಹಿನ್ನಡೆಯಲ್ಲಿದ್ದ ಭಜರಂಗ್‌ ಅನಂತರ ಅತ್ಯುತ್ತಮ ಆಟವಾಡಿ 13-8 ಅಂಕಗಳ ಅಂತರದಿಂದ ಗೆದ್ದರು. ಈ ಹಿಂದೆ 2017ರಲ್ಲಿ ನಡೆದ ‘ಡಾನ್‌ ಕೊಲೊವ್‌’ ಕೂಟ ದಲ್ಲಿ ಇವರಿಬ್ಬರ ನಡುವೆ ಕಾದಾಟ ನಡೆದಿತ್ತು. ಅಲ್ಲಿ ಭಜರಂಗ್‌ ಮೇಲುಗೈ ಸಾಧಿಸಿದ್ದರು.

25 ವರ್ಷದ ಭಜರಂಗ್‌ ಕಳೆದ ವಾರ ಚೀನದಲ್ಲಿ ನಡೆದ ‘ಏಶ್ಯನ್‌ ಚಾಂಪಿಯನ್‌ಶಿಪ್‌’ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next