Advertisement
ಗುರುವಾರ ನಡೆದ 65 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಭಜರಂಗ್ ಪೂನಿಯಾ ಕೊರಿಯಾದ ಜಾಂಗ್ ಚೋಯ್ ಸನ್ ವಿರುದ್ಧ 8-1 ಅಂತರದ ಭರ್ಜರಿ ಜಯ ಸಾಧಿಸಿದರು.
Related Articles
ಭಜರಂಗ್-ದೌಲತ್ ನಡುವಿನ ಸೆಮಿ ಪಂದ್ಯ ವಿವಾದಾತ್ಮಕವಾಗಿ ಮುಗಿಯಿತು. 6 ನಿಮಿಷಗಳ ಈ ಕಾದಾಟ 9-9ರಿಂದ ಸಮನಾಯಿತು. ಆದರೆ ಒಮ್ಮೆಲೇ ಗರಿಷ್ಠ 4 ಅಂಕ ಸಂಪಾದಿಸಿದ ಆತಿಥೇಯ ನಾಡಿನ ರೆಸ್ಲರ್‌ನನ್ನು ರೆಫ್ರಿ ವಿಜಯಿ ಎಂದು ಘೋಷಿಸಿದ್ದು ಭಾರತೀಯರ ಆಕ್ರೋಶಕ್ಕೆ ಕಾರಣವಾಯಿತು.
Advertisement
ಸಾಕ್ಷಿಗೆ ಪದಕವಿಲ್ಲವನಿತಾ ವಿಭಾಗದಲ್ಲಿ ರಿಯೋ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲ್ಲಿಕ್ ನೈಜೀರಿಯಾದ ಅಮಿನಾತ್ ಅಡೆನಿಯಿ ವಿರುದ್ಧ ಮೊದಲ ಸುತ್ತಿನಲ್ಲೇ ಎಡವಿದರು. ಬಳಿಕ ನೈಜೀರಿಯನ್ ಸ್ಪರ್ಧಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುವುದರೊಂದಿಗೆ ಸಾಕ್ಷಿಯ ಪದಕದ ದೂರದ ನಿರೀಕ್ಷೆಯೊಂದು ಕಮರಿ ಹೋಯಿತು. 68 ಕೆಜಿ ವಿಭಾಗದಲ್ಲಿ ದಿವ್ಯಾ ಕಕ್ರಾನ್ ಜಪಾನಿನ ಹಾಲಿ ಒಲಿಂಪಿಕ್ ಚಾಂಪಿಯನ್ ಸಾರಾ ಡೊಶೊ ವಿರುದ್ಧ ಮೊದಲ ಸುತ್ತಿನಲ್ಲೇ 0-2 ಅಂತರದ ಸೋಲನುಭವಿಸಿದರು. ಬುಧವಾರ ವನಿತಾ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ವಿನೇಶ್ ಪೋಗಟ್ ಮೊದಲಿಗರಾಗಿ ಒಲಿಂಪಿಕ್ ಅರ್ಹತೆ ಸಂಪಾದಿಸಿದ್ದರು.