Advertisement

ಖೇಲ್ ರತ್ನ ಪ್ರಶಸ್ತಿಗೆ ಫೋಗಾಟ್, ಬಜರಂಗ್ ಪುನಿಯಾ ಹೆಸರು ಶಿಫಾರಸು

08:35 AM Apr 30, 2019 | Nagendra Trasi |

ನವದೆಹಲಿ: ಭಾರತ ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಖ್ಯಾತ ಕುಸ್ತಿಪಟುಗಳಾದ ವಿನೇಶ್ ಫೋಗಾಟ್ ಮತ್ತು ಬಜರಂಗ್ ಪುನಿಯಾ ಹೆಸರನ್ನು ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಬು ಎಫ್ ಐ) ಶಿಫಾರಸು ಮಾಡಿದೆ.

Advertisement

ಬಜರಂಗ್ ಪ್ರಸ್ತುತ ವಿಶ್ವ ನಂಬರ್ ವನ್ ರಾಂಕಿಂಗ್ ನಲ್ಲಿದ್ದಾರೆ. 2018ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಬಜರಂಗ್ ಪುನಿಯಾ ಚಿನ್ನದ ಪದಕ ಗೆದ್ದಿದ್ದರು. 65ಕೆಜಿ ಫ್ರೀಸ್ಟೈಲ್ ಅಂತಿಮ ಸುತ್ತಿನ ಹಣಾಹಣಿಯಲ್ಲಿ ಪುನಿಯಾ ಅವರು ದೈಚಿ ಟಕಟಾನಿಯನ್ನು ಸೋಲಿಸಿದ್ದರು. ಅಷ್ಟೇ ಅಲ್ಲ 2020ರಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್ ನಲ್ಲಿಯೂ ಬಜರಂಗ್ ಪುನಿಯಾ ಮತ್ತಷ್ಟು ಚಿನ್ನದ ಪದಕ ಜಯಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.

ವಿನೇಶ್ ಫೋಗಾಟ್ ಕೂಡಾ 2018ರಲ್ಲಿ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಚಿನ್ನದ ಪದಕ ಮೊದಲ ಗೆದ್ದ ಪ್ರಥಮ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಅರ್ಜುನ ಪ್ರಶಸ್ತಿ:

ಏಷ್ಯನ್ ಬೆಳ್ಳಿ ಪದಕ ಜಯಿಸಿದ್ದ ಕುಸ್ತಿಪಟುಗಳಾದ ಹರ್ ಪ್ರೀತ್ ಸಿಂಗ್, ಕಂಚಿನ ಪದಕ ವಿಜೇತೆ ದಿವ್ಯಾ ಕಾಕ್ರಾನ್ ಹಾಗೂ ಪೂಜಾ ಧಾಂಡಾ ಅವರನ್ನು ಅರ್ಜುನ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

ವೀರೇಂದ್ರ ಕುಮಾರ್, ಸುಜೀತ್ ಮಾನ್, ನರೇಂದ್ರ ಕುಮಾರ್ ಮತ್ತು ವಿಕ್ರಮ್ ಕುಮಾರ್ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ, ಭೀಮ್ ಸಿಂಗ್ ಮತ್ತು ಜೈ ಪ್ರಕಾಶ್ ಅವರನ್ನು ಧ್ಯಾನ್ ಚಂದ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next