Advertisement

ಗೋಮಾಂಸ ಸಾಗಾಟ ಆರೋಪ: ಇಬ್ಬರನ್ನು ಥಳಿಸಿದ ಬಜರಂಗ ದಳ ಕಾರ್ಯಕರ್ತರು

03:20 PM Jul 01, 2023 | Team Udayavani |

ಭೋಪಾಲ್:‌ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಇಬ್ಬರು ಮುಸ್ಲಿಂ ವ್ಯಕ್ತಿಗಳನ್ನು ಬಜರಂಗದಳದ ಕಾರ್ಯಕರ್ತರು ಥಳಿಸಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ನಡೆದಿದೆ.

Advertisement

ಬಕ್ರೀದ್‌ ಹಬ್ಬದ ಅಂಗವಾಗಿ ಸಿಹಾದ ಗ್ರಾಮದ ಇಬ್ಬರು ಮುಸ್ಲಿಂ ವ್ಯಕ್ತಿಗಳು ದ್ವಿಚಕ್ರವಾಹನದಲ್ಲಿ ಇಮ್ಲಿಪುರದಿಂದ ಮಾಂಸವನ್ನು ಸಾಗಿಸುತ್ತಿದ್ದರು. ಈ ವೇಳೆ ಖಾಂಡ್ವಾದ ಪಾಲಿಟೆಕ್ನಿಕ್ ಕಾಲೇಜು ಬಳಿ ಇಬ್ಬರನ್ನು ಬಜರಂಗ ದಳದ ಕಾರ್ಯಕರ್ತರು ತಡೆದಿದ್ದಾರೆ. ಗೋಮಾಂಸವನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರ ಮೇಲೆ ಹಲ್ಲೆಗೈದಿದ್ದಾರೆ.

ನಾವು ಸಾಗಿಸುತ್ತಿರುವುದು ಗೋಮಾಂಸವಲ್ಲ, ಮಟಾನ್‌ ಎಂದು ಹೇಳಿದರೂ ಅವರ ಮಾತನ್ನು ಕೇಳದೆ ಕೋಲುಗಳಿಂದ ಹಲ್ಲೆಗೈದು, ಅವರ ಬಟ್ಟೆಯನ್ನು ಹರಿದು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಇಬ್ಬರನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸುತ್ತಿದ್ದರು ಎಂದು ವರದಿ ತಿಳಿಸಿದೆ.

ಆಡಳಿತವು ಖಾಂಡ್ವಾದ ಕಸಾಯಿಖಾನೆಗಳ ಮೇಲೆ ಕಟ್ಟುನಿಟ್ಟಾದ ನಿಗಾ ಇರಿಸಿದೆ. ಇಲ್ಲಿ ಗೋಮಾಂಸವನ್ನು ಪಡೆಯಲು ಸಾಧ್ಯವಿಲ್ಲ. ಕೆಲವು ಸಂಘಟನೆಗಳು ಸುಳ್ಳು ಆರೋಪ ಮಾಡುವ ಮೂಲಕ ನಗರದ ವಾತಾವರಣ ಹಾಳು ಮಾಡಲು ಷಡ್ಯಂತ್ರ ನಡೆಸುತ್ತಿವೆ ಎಂದು ಮ್ಯಾಜಿಸ್ಟ್ರೇಟ್ ಅಥವಾ ಶರಿಯಾ ನ್ಯಾಯಾಲಯದ ನ್ಯಾಯಾಧೀಶ ಸೈಯದ್ ನಿಸಾರ್ ಅವರು ಹೇಳಿದ್ದಾರೆ.

ಇದನ್ನೂ ಓದಿ: Maharastra: ಹೊತ್ತಿ ಉರಿಯುತ್ತಿದ್ದ ಬಸ್ಸಿನ ಕಿಟಕಿಯ ಗಾಜು ಒಡೆದು ನಾನು ಪಾರಾದೆ, ಆದರೆ…

Advertisement

ಇಬ್ಬರು ಗೋಮಾಂಸ ಸಾಗಿಸುತ್ತಿರುವುದನ್ನು ನಮ್ಮ ಕಾರ್ಯಕರ್ತರು ಗಮನಿಸಿದ್ದಾರೆ. ಅವರನ್ನು ಹಿಡಿದು ರಾಮೇಶ್ವರ ಚೌಕಿಗೆ ಕರೆತಂದಿದ್ದಾರೆ ಎಂದು ಬಜರಂಗದಳ ಜಿಲ್ಲಾ ಸಂಯೋಜಕ ಆದಿತ್ಯ ಮೆಹ್ತಾ ಹೇಳಿದ್ದಾರೆ.

“ಮುಸ್ಲಿಂ ಸಮುದಾಯದ ಕೆಲವರು ಭೇಟಿಯಾಗಲು ಬಂದಿದ್ದರು. ಅವರೇ ಥಳಿತದ ವಿಡಿಯೋವನ್ನು ತೋರಿಸಿದ್ದಾರೆ. ಈ ವೀಡಿಯೋವನ್ನು ಸಿಎಸ್‌ಪಿ ಹಾಗೂ ಠಾಣೆಯ ಉಸ್ತುವಾರಿಗೆ ನೀಡಿದ್ದೇವೆ. ಈ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿದುಕೊಂಡು ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು. ಈ ಬಗ್ಗೆ ಎರಡು ಪ್ರಕರಣಗಳು ದಾಖಲಾಗಿವೆ. ಪತ್ತೆಯಾದ ಮಾಂಸಕ್ಕೆ ಯಾವುದೇ ರಸೀದಿ ಇಲ್ಲದ ಕಾರಣ ಇಬ್ಬರು ಮುಸ್ಲಿಂಮರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಶುವೈದ್ಯರು ಇದರ ಮಾದರಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.

2019 ರಲ್ಲಿ, ಮಧ್ಯಪ್ರದೇಶ ವಿಧಾನಸಭೆಯು ಗೋಹತ್ಯೆ ವಿರೋಧಿ ತಿದ್ದುಪಡಿ ಕಾಯ್ದೆ 2019 ಅನ್ನು ಅಂಗೀಕರಿಸಿದ್ದು, ಗೋವಿನ ಹೆಸರಿನಲ್ಲಿ ಹಿಂಸಾಚಾರ ಎಸಗುವ ಅಪರಾಧಿಗಳಿಗೆ ಆರು ತಿಂಗಳಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000-50,000 ರೂ. ದಂಡವನ್ನು ವಿಧಿಸಲಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next