ಬಾಯಾರು ಬದಿಯಾರಿನಿಂದ ನೂರಾರು ಸಂಘಪರಿವಾರದ ಕಾರ್ಯ ಕರ್ತರು ಆರೋಪಿಗಳ ವಿರುದ್ಧ ಘೋಶಣೆಗಳನ್ನು ಕೂಗುತ್ತಾ ಮುಳಿಗದ್ದೆ ತನಕ ಮೆರವಣಿಗೆಯಲ್ಲಿ ಆಗಮಿಸಿದರು. ಬಳಿಕ ನಡೆದ ಪ್ರತಿಭಟನಾ ಕಾರ್ಯ ಕ್ರಮವನ್ನು ಬಿ.ಜೆ.ಪಿ.ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಬಾಯಾರಿನಲ್ಲಿ ಮತಾಂಧ ಗೂಂಡಾ ತಂಡ ಹಿಂದುಗಳ ಮೇಳೆ ನಿರಂತರವಾಗಿ ಹಲ್ಲೆ ನಡೆಸುತ್ತಿದೆ.ಆರೋಪಿಗಳನ್ನು ಸಕಾಲದಲ್ಲಿ ಬಂಧಿಸಲು ಪೊಲೀಸರು ಮುಂದಾಗದಿರುವುದು ಇನ್ನಷ್ಟು ಅಹಿತಕರ ಘಟನೆಗೆ ಕಾರಣವಾಗಿದೆ.ಇದೇ ರೀತಿ ಮುಂದುವರಿದಲ್ಲಿ ಸಂಘಪರಿವಾರದ ಕಾರ್ಯಕರ್ತರ ರಕ್ಷಣೆಗೆ ತಾವೇ ಕಾನೂನನ್ನು ಕೈಗೆತ್ತಿಕೊಳ್ಳ ಬೇಕಾದ ಅನಿವಾರ್ಯತೆಗೆ ಪೊಲೀಸರು ಅನುವು ಮಾಡದೆ ನೈಜ ಪ್ರಕರಣದ ಎಲ್ಲ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂಬುದಾಗಿ ಒತ್ತಾಯಿಸಿದರು.ಇಲ್ಲದಿದ್ದಲ್ಲಿ ಮುಂದೆ ಇನ್ನಷ್ಟು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಂಘಪರಿವಾರದ ನಾಯಕರಾದ ಅಕ್ಷಯ ರಜಪೂತ್, ಕೋಳಾರು ಸತೀಶ್ಚಂದ್ರ ಭಂಡಾರಿ, ಎಂ.ಹರಿಶ್ಚಂದ್ರ ಮಂಜೇಶ್ವರ, ಉಳುವಾನ ಶಂಕರ ಭಟ್,ಸದಾಶಿವ ಚೇರಾಲ್,ಪ್ರಸಾದ್ ರೈ ಕಯ್ನಾರ್,ಎ.ಸುಬ್ರಹ್ಮಣ್ಯ ಭಟ್,ಪೆರ್ವಡಿ ರಮಾನಾಥ ಭಂಡಾರಿ,ಮಣಿಕಂಠ ರೈ,ಸರೋಜಾ ಆರ್.ಬಲ್ಲಾಳ್,ಕೆ.ಜಯಲಕ್ಷ್ಮಿ ಭಟ್,ಕಿಶೋರ್ ಕುಮಾರ್,ಗಣೇಶ್ ಕುಲಾಲ್,ಸುಂದರ ಶೆಟ್ಟಿ ಕಳಾಯಿ,ಸುಕುಮಾರ ಭಟ್, ಧನುಶ್ ಬಾಯಾರ್,ಸಂತೋಶ್ ಬಾಯಾರು ಮುಂತಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.
Advertisement