Advertisement
ಬಜಪೆ ಪೊಲೀಸ್ ಠಾಣೆಯಿಂದ ಮುರನಗರ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಒಂದು ವಾಹನ ಸಾಗುವಷ್ಟಕ್ಕೆ ಮಾತ್ರ ಕಾಂಕ್ರೀಟ್ ಹಾಕಲಾಗಿತ್ತು. ಇದರಿಂದ ಎದುರು ಬರುವ ವಾಹನಗಳಿಗೆ ದಾರಿ ಕೊಡುವುದು ಲಘು ವಾಹನಗಳಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಕಾಂಕ್ರೀಟ್ ರಸ್ತೆಯನ್ನು ವಿಸ್ತರಿಸುವಂತೆ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.
ರಸ್ತೆ ಕಿರಿದಾಗಿದೆ ಎಂಬ ಸಮಸ್ಯೆ ದೂರವಾದರೂ ಈಗ ರಸ್ತೆ ವಿಸ್ತರಣೆಯಾಗಿದ್ದೇ ತಪ್ಪಾಯಿತು ಎನ್ನುವಂತೆ ಇಲ್ಲಿನ ರಸ್ತೆ ಏನೋ ವಿಸ್ತರಿಸಲಾಯಿತು. ಆದರೆ ಸುತ್ತಮುತ್ತಿಲಿನವರು ನಿತ್ಯವೂ ಧೂಳು ತಿನ್ನಬೇಕಾದ ಪ್ರಸಂಗ ಎದುರಾಗಿದೆ. ವಾಹನ ಸಂಚಾರ ಸುಗುಮವಾಗಲು ರಸ್ತೆ ಬದಿಯಲ್ಲಿ ಮಣ್ಣು ಹಾಕಲಾಗಿದೆ. ಘನ ವಾಹನಗಳು ಈ ರಸ್ತೆಯಲ್ಲಿ ಸಾಗುವ ಸಾಕಷ್ಟು ಧೂಳು ಎಳುತ್ತದೆ. ಇದರಿಂದ ಲಘು ವಾಹನ ಹಾಗೂ ದ್ವಿಚಕ್ರವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
Related Articles
ಬಜಪೆ ಪೊಲೀಸ್ ಠಾಣೆಯಿಂದ ಮುರನಗರ ಹಳೆವಿಮಾನ ನಿಲ್ದಾಣ ಕಾಂಕ್ರೀಟಿ ರಸ್ತೆಯ ಬದಿಗಳಲ್ಲಿ ಚರಂಡಿ ನಿರ್ಮಾಣವಾಗಿಲ್ಲ. ಮಳೆ ನೀರು ಹರಿದು ಹೋಗಲು ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ನಿಲ್ಲುವ ಸಾಧ್ಯತೆಗಳಿವೆ. ಚರಂಡಿ ನಿರ್ಮಾಣಕ್ಕೂ ಕ್ರಮ ತೆಗೆದುಕೊಳ್ಳಬೇಕು.
Advertisement
ಸೂಕ್ತ ಕ್ರಮ ಅಗತ್ಯಬಜಪೆ ಪೊಲೀಸ್ ಠಾಣೆಯಿಂದ ಮುರನಗರ ಹಳೆವಿಮಾನ ನಿಲ್ದಾಣ ಕಾಂಕ್ರೀಟ್ ರಸ್ತೆಯಲ್ಲಿ ಒಂದೇ ವಾಹನ ಸಂಚಾರವಾಗುವಷ್ಟು ಅಗಲವಿದೆ. ಇದನ್ನು ವಿಸ್ತರಿಣೆ ಮಾಡುವ ಬಗ್ಗೆ ಈಗಾಗಲೇ ಮನವಿ ಮಾಡಲಾಗಿದೆ. ಈ ರಸ್ತೆ ಕಂದಾವರ ಗ್ರಾ.ಪಂ.ನ ಕೊಳಂಬೆ ಹಾಗೂ ಬಜಪೆ ಪಟ್ಟಣ ಪಂಚಾಯತ್‌ನ ಗಡಿ ಯಾಗಿರುತ್ತದೆ. ಈಗ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದ್ದು, ಧೂಳಿನಿಂದವಾಹನ ಸಂಚಾರಕ್ಕೆ ಹಾಗೂ ಅಲ್ಲಿನ ನಿವಾಸಿಗಳಿಗೆ ನಿತ್ಯದ ಜೀವ ನಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಈಗಾಗಲೇ ನನಗೆ ದೂರು ಬಂದಿದೆ ಇದಕ್ಕೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
-ಉಮೇಶ್ ಮೂಲ್ಯ, ಅಧ್ಯಕ್ಷರು, ಗ್ರಾ.ಪಂ. ಕಂದಾವರ