Advertisement
ನರೇಗಾ ಯೋಜನೆಯಡಿ ಕಟ್ಟಡ ನಿರ್ಮಾಣಈ ಕಟ್ಟಡ 2016ರಲ್ಲಿ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡುವ ಅವಕಾಶದ ಬಗ್ಗೆ ಸರಕಾರದಿಂದ ಆದೇಶ ಬಂದಿತ್ತು. ಆ ಬಳಿಕ 2017ರಲ್ಲಿ ಅಂದಾಜು ಪಟ್ಟಿ ತಯಾರಿಗೆ ಆದೇಶ ನೀಡಿತು. ಬಜಪೆ ಗ್ರಾಮ ಪಂಚಾಯತ್ ನರೇಗಾ ಯೋಜನೆಯಡಿಯಲ್ಲಿ ಕ್ರಿಯಾ ಯೋಜನೆ ತಯಾರಿಸಿ, ಅನುಮೋದನೆ ಮಾಡಿ ಜನವರಿ 2018ರಲ್ಲಿ ನಿರ್ಮಾಣ ಕಾಮಗಾರಿ ಶುರು ಮಾಡಿತ್ತು. 10 ತಿಂಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಮಂಗಳೂರು ತಾಲೂಕಿನಲ್ಲಿಯೇ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಪ್ರಥಮ ಸಂಜೀವಿನಿ ಕಟ್ಟಡ ಇದಾಗಿದೆ.
ಇದು ಸುಮಾರು 1,500 ಚ.ಅಡಿ. ವಿಸ್ತೀರ್ಣವುಳ್ಳ ಆರ್‌ಸಿಸಿ ಕಟ್ಟಡ. ಒಂದು ಹಾಲ್ ಎರಡು ಕೋಣೆ, ಸ್ನಾನ ಗೃಹ ಹಾಗೂ ಶೌಚಾಲಯದ ವ್ಯವಸ್ಥೆಗಳನ್ನು ಒಳಗೊಂಡಿದೆ. ಅಭಿಯಾನದ ಗುರಿ
ಲಾಭದಾಯಕ ಆದಾಯವನ್ನು ಒದಗಿಸುವುದರ ಮೂಲಕ ಬಡತನ ಪ್ರಮಾಣವನ್ನು ಕಡಿಮೆಗೊಳಿಸುವುದು ಮತ್ತು ಸಮುದಾಯ ಸಂಸ್ಥೆಗಳ ಮೂಲಕ ಸ್ವ-ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದರಿಂದಾಗಿ ಗ್ರಾಮೀಣ ಜನರ ಜೀವನಮಟ್ಟದಲ್ಲಿ ಸಮರ್ಥನೀಯವಾದ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂಬ ಗುರಿಯೊಂದಿಗೆ ಇದನ್ನು ಆರಂಭಿಸಲಾಗಿದೆ.
Related Articles
ಗ್ರಾಮೀಣಾಭಿವೃದ್ಧಿ ಮಂತ್ರಾಲಯ ರೂಪಿಸಿದ್ದ ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆಯನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಆಜೀವಿಕಾ) ಎಂದು ಪುನರ್ ರಚನೆ ಮಾಡಲಾಗಿದೆ. ಗ್ರಾಮೀಣ ಬಡತನದ ಮಟ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಸೃಷ್ಟಿ ಮತ್ತು ಸಾಂಸ್ಥಿಕ ವೇದಿಕೆಯನ್ನು ಬಲಪಡಿಸುವ ಮೂಲಕ ರಾಜ್ಯಾದ್ಯಂತ ‘ಸಂಜೀವಿನಿ’ಯನ್ನು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ (ಕೆಎಸ್‌ಆರ್‌ಎಲ್‌ಪಿಎಸ್) ಎಂಬ ಸಂಸ್ಥೆಯನ್ನು ಪ್ರಾರಂಭಿಸಿದೆ.
Advertisement
ಯೋಜನೆಯ ವಿವರ.ಫಲಾನುಭವಿಗಳು -ಬಿಪಿಎಲ್ ಕುಟುಂಬದ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಪಂಚ ಸೂತ್ರಗಳ ಅನುಸರಣೆ-ನಿರಂತರ ಸಭೆ, ಉಳಿತಾಯ, ಆಂತರಿಕ ಸಾಲ, ಮರುಪಾವತಿ ಮತ್ತು ಲೆಕ್ಕಪತ್ರ ನಿರ್ವಹಣೆ.
.ಅಸಂಘಟಿತ ಮಹಿಳೆಯರನ್ನು ಸಂಘಟಿಸಿ ಹೊಸ ಗುಂಪುಗಳ ರಚನೆ.
. ವಿವಿಧ ಹಂತಗಳಲ್ಲಿ ಒಕ್ಕೂಟಗಳ ನಿರ್ಮಾಣ.
. ಆರ್ಥಿಕ ಸೇರ್ಪಡೆ ಸಶಕ್ತೀಕರಿಸುವ ದೃಷ್ಟಿಯಿಂದ ನಿರ್ಮಾಣ
ಗ್ರಾಮದ ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳ ಆರ್ಥಿಕ ಸಶಕ್ತೀಕರಣ ಮಾಡುವ ದೃಷ್ಟಿಯಿಂದ ಪಂಚಾಯತ್ ಇದನ್ನು ನಿರ್ಮಾಣ ಮಾಡಿದೆ. ಸ್ವಸಹಾಯ ಸಂಘಗಳ ಗುಂಪುಗಳ ಸಭೆ, ಚಟುವಟಿಕೆ, ಉತ್ಪನ್ನಗಳ ಮಾರಾಟ ಮಾಡಲು ಈ ಕಟ್ಟಡದಲ್ಲಿ ಅವಕಾಶವನ್ನು ಕಲ್ಪಿಸಲಾಗುತ್ತದೆ. ಸರಕಾರದಿಂದ ಬಂದ ಅನುದಾನ, ಯೋಜನೆಯನ್ನು ಪಂಚಾಯತ್ ಸಮರ್ಪಕವಾಗಿ ಬಳಸಿ ಪಂಚಾಯತ್‌ನ ಒಂದು ಆಸ್ತಿಯನ್ನಾಗಿ ಮಾಡಿದೆ.
– ಸಾಯೀಶ್ ಚೌಟ,
ಪಿಡಿಒ, ಬಜಪೆ ಗ್ರಾ.ಪಂ.