Advertisement
ಇಳಿದ ಬ್ಯಾಡಗಿ ಮೆಣಸಿನ ದರಹೆಚ್ಚಾಗಿ ಪದಾರ್ಥಕ್ಕೆ ಉಪಯೋಗಿಸುವ ಬ್ಯಾಡಗಿ ಮೆಣಸಿಗೆ ಈ ಸಂತೆಯಲ್ಲಿ ದರ ಕೊಂಚ ಕಡಿಮೆಯಾಗಿದೆ. 600 ರೂ. ಸಮೀಪಕ್ಕೆ ತಲುಪಿದ ಬ್ಯಾಡಗಿ ಮೆಣಸು. ಕಳೆದ ಸಂತೆಯಲ್ಲಿ ಕೆ.ಜಿ.540 ರೂ.ದರ ಇತ್ತು. ಈ ಬಾರಿ 500 ರೂ. ಕ್ಕಿಂತ ಕೊಂಚ ಕಡಿಮೆಯಾಗಿದೆ.ದರ ಇನ್ನೂ ಹೆಚ್ಚಾದರೆ ಜನರು ಹತ್ತಿರವೇ ಬರಲಿಕ್ಕಿಲ್ಲ, ದರ ಏರಿಕೆಯಿಂದ ಜನರು ಮೆಣಸಿನ ಬಳಕೆ ಕಡಿಮೆ ಮಾಡಿದ್ದಾರೆ. ಇದರಿಂದ ಮೆಣಸಿನ ವ್ಯಾಪಾರ ಕಡಿಮೆಯಾಗಿದೆ. ಈಗ ದರ ಕಡಿಮೆಯಾಗಲು ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಬಜಪೆ ಸೋಮವಾರ ಸಂತೆಗೆಂದು ಬರುವ ಜನರು, ಕೃಷಿಕರು ಗೋಡಂಬಿಯನ್ನು ಗೋಣಿಯಲ್ಲಿ ತಂದು ಮಾರಿ ಆ ಹಣದಿಂದ ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಂಡ್ಯುಯುವುದು ಹಿಂದಿನಿಂದ ಬಂದ ಸಂಪ್ರಾದಾಯ. ಸೋಮವಾರದಂದು ಟನ್ ಗಟ್ಟಳೆ ಗೋಡಂಬಿ ಬಜಪೆ ಸೋಮವಾರ ಸಂತೆಗೆ ಬರುತ್ತಿತ್ತು. ಇದು ಗ್ರಾಮೀಣ ಜನರ ಅರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಾರಣವಾಗಿತ್ತು. ಮಾರ್ಚ್ ಹಾಗೂ ಎಪ್ರಿಲ್ ತಿಂಗಳು ಗೋಡಂಬಿ ಫಸಲು ಬರುವ ಸಮಯ ಅದರೆ ಯಾರೂ ಗೋಣಿಯಲ್ಲಿ ಹೊತ್ತು ತಂದ ದೃಶ್ಯವೇ ಕಂಡು ಬಂದಿಲ್ಲ. ದರ ಕೆ.ಜಿ.ಗೆ 90ರಿಂದ 100 ರೂ.ಇದ್ದರೂ ಗೋಡಂಬಿ ಬೆಳೆಯೇ ಇಲ್ಲ.ಗೋಡಂಬಿ ಮರವೇ ವಿರಳವಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ಮನೆಗಳು ನಿರ್ಮಾಣವಾಗಿದೆ. ಇದರಿಂದ ಗೋಡಂಬಿ ಮರಗಳು ಈಗ ಕಾಣದೇ ಹೋಗಿದೆ.