ಬಜಪೆ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಜಪೆ ಗ್ರಾಮದ ಶಾಂತಿಗುಡ್ಡೆಯ ಧೂಮಾವತಿ ಬಸ್ ನಿಲ್ದಾಣ ಬಳಿ ಬಜಪೆ ಪೊಲೀಸ್ ಉಪ ನಿರೀಕ್ಷಕರು, ಸಿಬಂದಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಸುರತ್ಕಲ್ ಕೃಷ್ಣಾಪುರ ನಿವಾಸಿ ಸಾಹಿಲ್ ಇಸ್ಮಾಯಿಲ್ (28) ಸ್ಕೂಟರ್‌ನಲ್ಲಿ ಸುಮಾರು 3 ಸಾವಿರ ರೂ. ಮೌಲ್ಯದ 1.21 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಇರಿಸಿಕೊಂಡು ಸಾಗಾಟ ಮಾಡುತ್ತಿದ್ದದ್ದನ್ನು ಪತ್ತೆ ಮಾಡಿ ಸಾಹಿಲ್ ಇಸ್ಮಾಯಿಲ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನೋರ್ವ ಆರೋಪಿ ಯಾಸಿರ್ ಯಾನೆ ಯಾಚಿ ತಲೆ ಮರೆಸಿಕೊಂಡಿದ್ದಾನೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಯಿಂದ ಒಂದು ಸ್ಕೂಟರ್ ವಶಕ್ಕೆ ಪಡೆಯಲಾಗಿದೆ.
ಆಪಾದಿತ ಪೈಕಿ ಸಾಹಿಲ್ ಇಸ್ಮಾಯಿಲ್ ವಿರುದ್ಧ ಬಜಪೆ, ಬರ್ಕೆ, ಸುರತ್ಕಲ್, ಪಣಂಬೂರು, ಹಾಸನ ಪೊಲೀಸ್ ಠಾಣೆಗಳಲ್ಲಿ ಕೊಲೆ ಸುಲಿಗೆ ಕೇಸುಗಳು ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಮಾರ್ಗದರ್ಶನದಂತೆ ಈ ಕಾರ್ಯಾಚರಣೆಯನ್ನು ಡಿಸಿಪಿ ಯವರಾದ ಅಂಶು ಕುಮಾರ್ ಮತ್ತು ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಎನ್. ಮಹೇಶ್‌ಕುಮಾರ್ ಅವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್, ಪಿಎಸ್‌ಐಗಳಾದ ಗುರುಕಾಂತಿ, ಪ್ರೊ ಪಿಎಸ್‌ಐ ಸಂತೋಷ್, ಎಎಸ್‌ಐ ರಾಮಣ್ಣ ಪೂಜಾರಿ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಸಂತೋಷ್, ಸುಜನ್, ದಯಾನಂದ, ಕಾನ್‌ಸ್ಟೆಬಲ್‌ಗಳಾದ ಸಂಜೀವ, ಉಮೇಶ್ ಭಾಗವಹಿಸಿದ್ದಾರೆ.
ಎಂಡಿಎಂಎ ಸಹಿತ ಇಬ್ಬರ ಬಂಧನ
ಕಾಸರಗೋಡು: ಕಾಪಾ ಕಾಯ್ದೆ ಪ್ರಕಾರ ಗಡಿಪಾರು ಮಾಡಲ್ಪಟ್ಟ ಆರೋಪಿ ಸಹಿತ ಇಬ್ಬರನ್ನು ಎಂಡಿಎಂಎ ಸಾಗಾಟ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಂಬಲತ್ತರ ಪರಕ್ಕಳಾಯಿ ಕಾಯಲಡ್ಕ ನಿವಾಸಿ ರಂಶೀದ್ ಬಿ. ಯಾನೆ ಕಿಚ್ಚು (30) ಮತ್ತು ಅಂಬಲತ್ತರ ಮೂರನೇ ಮೈಲು ಮಿಶಬಾ ಮಂಜಿಲ್‌ನ ಸುಬೈರ್ ಟಿ.ಎಂ.(42)ನನ್ನು ಬಂಧಿಸಿ ಅವರಿಂದ 1.880 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.