Advertisement

Bajpe ಗಾಂಜಾ ಸಾಗಾಟ ಪ್ರಕರಣ: ಮೂವರು ಸೆರೆ

08:32 PM Nov 18, 2023 | Team Udayavani |

ಬಜಪೆ: ಇಲ್ಲಿನ ಕಾಜಿಲ್‌ ಎಂಬಲ್ಲಿ ಬಜಪೆ ಠಾಣೆಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಬರುತ್ತಿದ್ದ ಮೂವರನ್ನು ತಡೆದು ವಿಚಾರಣೆ ನಡೆಸಿದಾಗ ಗಾಂಜಾವನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು. ಈ ಸಂಬಂಧ ಮೂವರನ್ನು ಬಂಧಿಸಲಾಯಿತಲ್ಲದೇ 340 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಮೂವರನ್ನು ಎಸ್‌ಐ ಗುರಪ್ಪ ಕಾಂತಿ ತಡೆದಾಗ ಅವರು ಸ್ಕೂಟರ್‌ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದರು. ಆದರೆ ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ ಗಾಂಜಾ ಸಾಗಿರುವುದು ತಿಳಿದುಬಂತು. ಬಳಿಕ ತೇಜಾಕ್ಷ ಪೂಜಾರಿ (22), ಸಂತೋಷ್‌ ಪೂಜಾರಿ (24) ಮತ್ತು ಅಬೂಬಕ್ಕರ್‌ ಸಿದ್ದಿಕ್‌ (26) ನನ್ನು ಬಂಧಿಸಿ ಗಾಂಜಾವನ್ನು ವಶಡಿಸಿಕೊಳ್ಳಲಾಯಿತು.

ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ತಡೆಗಟ್ಟುವಲ್ಲಿ ವಿಶೇಷ ಕಾರ್ಯಚರಣೆ ನಡೆಸುವಂತೆ ಪೊಲೀಸ್‌ ಆಯುಕ್ತ ಅನುಪಮ್‌ ಅಗರವಾಲ್‌ ರವರ ಮಾರ್ಗದರ್ಶನದಂತೆ ಬಜಪೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next