Advertisement
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಸುಮಾರು 5ಲಕ್ಷ ರೂ. ಅನುದಾನದಲ್ಲಿ ಬಜಪೆ ಮೀನು ಮಾರು ಕಟ್ಟೆಯಲ್ಲಿ ಶೀತಲೀಕರಣ ಘಟಕ ನಿರ್ಮಾಣವಾಗುತ್ತಿದೆ. ಇದರಿಂದ ಮೀನು ವ್ಯಾಪಾರಿ ಗಳಿಗೆ ಅನುಕೂಲವಾಗಲಿದೆ.
Related Articles
ಶಾಸಕ ಉಮಾನಾಥ ಕೋಟ್ಯಾನ್ ಅವರು ಮೂಲ್ಕಿ-ಮೂಡಬಿದಿರೆ ವಿಧಾನ ಭಾ ಕ್ಷೇತ್ರದಲ್ಲಿ ಈಗಾಗಲೇ ಕಿನ್ನಿ ಗೋ ಳಿಯ ಮೀನು ಮಾರುಕಟ್ಟೆ ಯಲ್ಲಿ ಮೀನು ಸಂಗ್ರಹಕ್ಕಾಗಿ ಶೀತಲೀಕರಣ ಘಟಕವು ಈಗಾಗಲೇ ಉದ್ಘಾಟನೆ ಗೊಂಡು ಕಾರ್ಯಾರಂಭ ಗೊಂಡಿದೆ. ಕ್ಷೇತ್ರದಲ್ಲಿ ಮುಂದುವರಿದು ಬಜಪೆ ಮೀನು ಮಾರುಕಟ್ಟೆಯು ಕಾರ್ಯಾ ರಂಭಗೊಳ್ಳುತ್ತಿರುವ ಕ್ಷೇತ್ರದ ಎರಡನೇ ಸಂಗ್ರಹ ಘಟಕವಾಗಿದೆ. ಬಜಪೆ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ 2012ರಲ್ಲಿ ನಿಗಮದ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯ 10ಲಕ್ಷ ರೂ. ಹಾಗೂ ಬಜಪೆ ಗ್ರಾ.ಪಂ.ನ 3ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾಗಿತ್ತು. ಬಜಪೆ ಮೀನು ಮಾರುಕಟ್ಟೆಯಲ್ಲಿ ದಿನಂಪ್ರತಿ 8 ಮಂದಿ ಮೀನು ವ್ಯಾಪಾರಿಗಳು, ಸೋಮವಾರದ ಸಂತೆ ದಿನದಂದು 12 ಮಂದಿ ಮೀನು ವ್ಯಾಪಾರಿಗಳು ಇಲ್ಲಿ ವ್ಯಾಪಾರ ಮಾಡುತ್ತಾರೆ. ಇದರಲ್ಲಿ 8 ಮಹಿಳೆಯರು, 4 ಪುರುಷರು, ತಿಂಗಳಿಗೆ 3 ಸಾವಿರ ರೂ. ನಷ್ಟು ತೆರಿಗೆ ಪಾವತಿಸುತ್ತಿದ್ದಾರೆ.
Advertisement
2 ಟನ್ ಮೀನು ಸಂಗ್ರಹ ಸಾಧ್ಯಗ್ರಾಹಕರಿಗೆ ತಾಜಾ, ಗುಣಮಟ್ಟದ ಮೀನು ಸಿಗಬೇಕು ಎನ್ನುವ ಉದ್ದೇಶದಿಂದ ಮೀನು ಮಾರುಕಟ್ಟೆಯಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಶೀತಲೀಕರಣ ಘಟಕ ಆರಂಭಿಸಲಾಗುತ್ತದೆ. ಇದರಲ್ಲಿ ಸುಮಾರು 2 ಟನ್‌ಗಳಷ್ಟು ಮೀನುಗಳನ್ನು ಶೇಖರಿಸಿಡಲು ಸಾಧ್ಯವಿದೆ. ಕಿನ್ನಿಗೋಳಿ ಮೀನು ಮಾರುಕಟ್ಟೆ ಯಲ್ಲಿಯೂ ಕೂಡ ಇಷ್ಟೇ ಸಾಮರ್ಥ್ಯದ ಘಟಕವನ್ನು ಆರಂಭಿಸಲಾಗಿದೆ.
– ಅಮರನಾಥ ಜೈನ್, ನಿಗಮದ ಸಹಾಯಕ ಕಾರ್ಯವಾಹಕ ಎಂಜಿನಿಯರ್ ಬಜಪೆ ಅಭಿವೃದ್ಧಿಗೆ ಪೂರಕ
ಬಜಪೆ ನಗರವಾಗಿ ಬೆಳೆಯುತ್ತಿದ್ದು ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಪರಿಸರದ ಜನತೆಗೆ ಸದಾ ತಾಜಾ ಮೀನು ಸಿಗುವಂತಾಗಲು ಮೀನು ಮಾರುಕಟ್ಟೆಯಲ್ಲಿ ಮೀನು ಸಂಗ್ರಹಣಾ ಶೀತಲೀಕರಣ ಘಟಕವನ್ನು ಸದ್ಯದಲ್ಲಿ ಆರಂಭಸಿಲಾಗುತ್ತಿದೆ. ಗ್ರಾಹಕರು ಹಾಗೂ ಮೀನು ವ್ಯಾಪಾರಿಗಳಿಗೆ ಹೆಚ್ಚು ಅನುಕೂಲಕರವಾಗಲಿದೆ.
– ಉಮಾನಾಥ ಕೋಟ್ಯಾನ್, ಶಾಸಕರು, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರ -ಸುಬ್ರಾಯ ನಾಯಕ್, ಎಕ್ಕಾರು