Advertisement

Bajpe ಪೇಟೆ ಸಣ್ಣ ಸೇತುವೆ, ತೋಡಿಗೆ ತ್ಯಾಜ್ಯ ಎಸೆತ; ಪರಿಸರವೆಲ್ಲ ದುರ್ನಾತ

01:12 PM Oct 15, 2024 | Team Udayavani |

ಬಜಪೆ: ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಪೇಟೆಯಲ್ಲಿನ ಬಜಪೆ ವ್ಯವಸಾಯ ಸೇವಾ ಸಹಕಾರಿ ಸಂಘದ ಬಳಿಯ ಸಣ್ಣ ಸೇತುವೆಯ ಮೇಲೆ ಹಾಗೂ ನೀರು ಹರಿಯುವ ತೋಡಿಗೆ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಇದ್ದರಿಂದ ರಸ್ತೆಯಲ್ಲಿ ಬದಿಯಲ್ಲಿ ದುರ್ನಾತದಿಂದ ಪಾದಚಾರಿಗಳಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ.

Advertisement

ಪ್ಲಾಸ್ಟಿಕ್‌ ಸಹಿತ ಹಸಿ, ಒಣಕಸಗಳನ್ನು ತೊಡೆಗೆ ಎಸೆದಿದ್ದಾರೆ. ತೋಡಿಗೆ ಎಸೆಯವ ಸಮಯದಲ್ಲಿ ಈ ತ್ಯಾಜ್ಯ ಬಿದ್ದು ಪರಿಸರ ದುರ್ನಾತ ಬೀರುತ್ತಿದೆ. ಬಜಪೆ ಪಟ್ಟಣ ಪಂಚಾಯತ್‌ ತ್ಯಾಜ್ಯ ವಿಲೇವಾರಿಯನ್ನು ಮಾಡುತ್ತಿದ್ದರೂ ಇಲ್ಲಿ ತ್ಯಾಜ್ಯ ಎಸೆಯುವವರು ಯಾರೂ ಎಂದು ಪರಿಸರದ ಸಿಸಿ ಕೆಮರಾಗಳಲ್ಲಿ ಪತ್ತೆ ಹಚ್ಚಿ ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತೋಡಿನಲ್ಲಿ ತ್ಯಾಜ್ಯದ ರಾಶಿಯೇ ಬೆಳೆದಿದೆ. ಪರಿಸರ ನಾಶವಾದರೇ ನಮ್ಮ ನಾಶ ಎಂದು ತಿಳಿದು ಜನರೇ ಜಾಗೃತರಾಗಿ ಇಂತಹ ತ್ಯಾಜ್ಯ ಎಸೆಯುವ ಕೃತ್ಯಗಳಿಗೆ ಕಡಿವಾಣ ಹಾಕಬೇಕು.

ನೆಟ್‌ ಬಳಕೆಗೆ  ಉದಯವಾಣಿ ವರದಿ ಮಾಡಿತ್ತು
ಸಣ್ಣ ಸೇತುವೆಗೆ ಅಡ್ಡದಾಗಿ ನೆಟ್‌ (ಬಲೆ) ಹಾಕಬೇಕು. ಇದರಿಂದ ತ್ಯಾಜ್ಯ ಎಸೆತ ಕಡಿಮೆಯಾಗಲಿದೆ ಎಂದು ಉದಯವಾಣಿ ಈ ಬಗ್ಗೆ ಬಜಪೆ ಪಟ್ಟಣ ಪಂಚಾಯತ್‌ನ ಗಮನ ಸೆಳೆದಿತ್ತು. ಈ ತನಕ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಶೀಘ್ರ ನೆಟ್‌ ಬಳಕೆಯಾದರೆ ತೋಡಿನಲ್ಲಿ ತ್ಯಾಜ್ಯ ಬಿಸಾಡುವುದು ಹಾಗೂ ರಾಶಿಯೂ ಕಡಿಮೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next