Advertisement
ಐದು ವರ್ಷದ ಹಿಂದೆಯೇ ಸರ್ವ ಸಿದ್ಧತೆಬಜಪೆ ಮಾರುಕಟ್ಟೆಗೆ ಹೈಟೆಕ್ ರೂಪವನ್ನು ಒದಗಿಸಲು ಬಜಪೆ ಗ್ರಾಮ ಪಂಚಾಯತ್ ಇರುವಾಗಲೇ ರೂಪುರೇಷೆ ಹಾಕಲಾಗಿತ್ತು. ಸುಮಾರು 17.95 ಕೋಟಿ ರೂ. ಮೊತ್ತದ ಅನುದಾನದಲ್ಲಿ ನಾಲ್ಕು ಮಹಡಿಗಳ ಹೈಟೆಕ್ ಮಾರುಕಟ್ಟೆಗೆ ನೀಲ ನಕ್ಷೆ ಸಹಿತ ಯೋಜನೆಗೆ ಅಂದಿನ ಪಿಡಿಒ ಆಗಿದ್ದ ಸಾಯೀಶ್ ಚೌಟ ಅವರು ಅದಕ್ಕೆ ಬೇಕಾದ ದಾಖಲೆ ಸಹಿತ 2018-19ರಲ್ಲಿ ಎಲ್ಲ ಸಿದ್ಧತೆಯನ್ನು ಮಾಡಿದ್ದರು. ಅದರೆ ಗ್ರಾಮಾಭಿವೃದ್ದಿ ಇಲಾಖೆಯಲ್ಲಿ ಇದಕ್ಕೆ ಅನುದಾನ ಒದಗಿಸಲು ಕೆಲವೊಂದು ಅಡೆತಡೆಯ ಕಾರಣದಿಂದಾಗಿ ಹಾಗೂ ಬಳಿಕ ಬಜಪೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ್ದ ಕಾರಣ ಅದು ಅಲ್ಲಿಯೇ ಉಳಿಯಿತು.
ನಾಲ್ಕು ಮಹಡಿಗಳ ಕಟ್ಟಡದ ನೆಲ ಮಹಡಿಯಲ್ಲಿ ತರಕಾರಿ, ಮೀನು, ಒಣಮೀನು ಮಳಿಗೆಗಳು, ಬೇಸ್ಮೆಂಟ್ನಲ್ಲಿ ಕಾರು ಮತ್ತು ಬೈಕ್ ಪಾರ್ಕಿಂಗ್, ಒಂದನೇ ಮಹಡಿನಲ್ಲಿ ವಾಣಿಜ್ಯ ಅಂಗಡಿಗಳು, 2ನೇ ಮಹಡಿಯಲ್ಲಿ ಗೋದಾಮುಗಳು, ಮೂರನೇ ಮಹಡಿಯಲ್ಲಿ ಕಚೇರಿ ಸಭಾಭವನ ಹಾಗೂ ನಾಡಕಚೇರಿ, ಗ್ರಾಮಕರಣಿಕರ ಕಚೇರಿ, ನಾಲ್ಕನೇ ಮಹಡಿಯಲ್ಲಿ ಸಭಾಭವನ ಇರಬೇಕು ಎಂದು ನೀಲನಕ್ಷೆ ತಯಾರಿಸಲಾಗಿತ್ತು. ಈಗಾಗಲೇ ತಯಾರು ಪಡಿಸಿದ್ದ ಅಂದಿನ ಈ ನೀಲ ನಕ್ಷೆ ಹಾಗೂ ಯೋಜನೆಯನ್ನು ಪ. ಪಂ.ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮುಂದುವರಿಸುವ ಕೆಲಸ ಈಗ ಆಗಬೇಕಾಗಿದೆ. ಗ್ರಾಮಕರಣಿಕ ಕಚೇರಿಗೂ ಬೇಕು ಹೊಸ ರೂಪ
ಬಜಪೆ ಪೇಟೆಯೇ ಅಭಿವೃದ್ಧಿಗೊಳ್ಳುತ್ತಿರುವಾಗ ರಸ್ತೆಯ ಪಕ್ಕದಲ್ಲಿಯೇ ಇರುವ ಗ್ರಾಮ ಆಡಳಿತಾಧಿಕಾರಿ ಕಚೇರಿ ಮಾತ್ರ ಹಾಗೆಯೇ ಉಳಿದಿರುವುದು ಅಚ್ಚರಿ ಮೂಡಿಸಿದೆ.
Related Articles
Advertisement
ಬಜಪೆ ಗ್ರಾಮ ಪಂಚಾಯತ್ನ 2018-19ರಲ್ಲಿ ರೂಪಿಸಲಾದ ಹೈಟೆಕ್ ಮಾರುಕಟ್ಟೆ ನಕ್ಷೆಯಲ್ಲಿ ಮೂರನೇ ಮಹಡಿಯಲ್ಲಿ ಕಂದಾಯ ಇಲಾಖೆಯ ನಾಡಕಚೇರಿ ಹಾಗೂ ಗ್ರಾಮ ಕರಣಿಕರ ಕಚೇರಿಯ ಬಗ್ಗೆಯೂ ನಮೂದಿಸಲಾಗಿದೆ.
ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಬಜಪೆ ಪಟ್ಟಣ ಪಂಚಾಯತ್ನ ಒಮ್ಮತದ ನಿರ್ಧಾರ ಅಗತ್ಯವಾಗಿದೆ.
ಸರಕಾರದ ಅನುದಾನದಲ್ಲಿಯೇ ಈ ಹೈಟೆಕ್ ಮಾರುಕಟ್ಟೆ ಹಾಗೂ ಗ್ರಾಮ ಕರಣಿಕರ ಕಚೇರಿಗೆ ಹೊಸ ಕಟ್ಟಡ ನಿರ್ಮಿಸಲು ಹಲವಾರು ವರ್ಷಗಳೇ ಬೇಕಾಗಬಹುದು. ಹೀಗಾಗಿ ಕಂಪನಿಗಳ ಸಿಎಸ್ಆರ್ ಫಂಡ್ ನೆರವು ಪಡೆಯಬಹುದು ಎಂಬ ಅಭಿಪ್ರಾಯವಿದೆ.
ಹಿಂದೆ ಕಂಟ್ರೋಲ್ ರೂಮ್ ಆಗಿತ್ತು ಈಗಿನ ಗ್ರಾಮಕರಣಿಕರ ಕಚೇರಿ ಹಿಂದೆ ಕಂಟ್ರೋಲ್ ರೂಂ ಆಗಿತ್ತು. ಹಿಂದೆ ವಿಮಾನ ನಿಲ್ದಾಣ ಬಜಪೆಯಲ್ಲೇ ಇದ್ದ ಕಾರಣ, ವಿಮಾನ ನಿಲ್ದಾಣಕ್ಕೆ ಅತಿ ಪ್ರಮುಖ ಹಾಗೂ ಪ್ರತಿಷ್ಠಿತ ವ್ಯಕ್ತಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಬಂದಾಗ ಅವರ ಬಗ್ಗೆ ಮಾಹಿತಿಯನ್ನು ಈ ಕಂಟ್ರೋಲ್ ರೂಮ್ಗೆ ಬರುತ್ತಿತು. ಅಗ ಅವರನ್ನು ಸ್ವಾಗತಿಸಲು ಇಲ್ಲಿಂದ ಗ್ರಾಮಕರಣಿಕರು ಹೋಗಬೇಕಿತ್ತು. ಈಗಲೂ ಅದರ ಯಾಂಟೆನಾ ಹಾಗೂ ಸಾಧನ ಉಪಕರಣಗಳನ್ನು ಅಲ್ಲಿ ಕಾಣಬಹುವುದು. ಪಾರ್ಕಿಂಗ್, ತ್ಯಾಜ್ಯ ರಾಶಿ ಸಮಸ್ಯೆ
ಮಾರುಕಟ್ಟೆಯ ಪಕ್ಕದಲ್ಲಿಯೇ ರಸ್ತೆಯ ಬದಿಯಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ರಸ್ತೆಯಲ್ಲಿಯೇ ವಾಹನ ಪಾರ್ಕಿಂಗ್ ಮಾಡುತ್ತಿದೆ. ಇದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಜತೆಗೆ ಅಸಹ್ಯದ ವಾತಾವರಣ ನಿರ್ಮಾಣವಾಗುತ್ತದೆ. ಹೈಟೆಕ್ ಮಾರುಕಟ್ಟೆ ಕಟ್ಟಡ ನಿರ್ಮಾಣದಿಂದ ಈ ಎರಡು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಇದೆ. -ಸುಬ್ರಾಯ ನಾಯಕ್ ಎಕ್ಕಾರು