Advertisement

2 ದಿನಗಳ ಭಜನ ಶಿಬಿರ ಉದ್ಘಾಟನೆ

11:43 PM Apr 08, 2019 | mahesh |

ಉಪ್ಪಿನಂಗಡಿ: ಇಲ್ಲಿನ ವೇದಶಂಕರ ನಗರದ ಶ್ರೀರಾಮ ಶಾಲೆಯಲ್ಲಿ ಎರಡು ದಿನಗಳ ಭಜನ ತರಬೇತಿ ಶಿಬಿರ ಸೋಮವಾರ ಉದ್ಘಾಟನೆಗೊಂಡಿತು. ಉಪ್ಪಿನಂಗಡಿ ಕಾಳಿಕಾಂಬಾ ಭಜನ ಮಂಡಳಿಯ ಆಶ್ರಯದಲ್ಲಿ ನಡೆದ ಈ ಶಿಬಿರವನ್ನು ಉದ್ಘಾಟಿಸಿದ ಮಂಗಳೂರಿನಲ್ಲಿ ಎಸಿಬಿಯ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿರುವ ಕೆ.ಎಸ್‌.ಎನ್‌. ರಾಜೇಶ್‌, ಮನವನ್ನರಳಿಸುವ, ಭಗವಂತನೊಂದಿಗೆ ಬೆಸುಗೆ ಮೂಡಿಸುವ ಭಜನೆಯನ್ನು ಶಾಲೆಯೊಂದರಲ್ಲಿ ದಿನನಿತ್ಯದ ಚಟುವಟಿಕೆಯ ಅಂಗವಾಗಿಸಿರುವುದು, ಮಾತ್ರವಲ್ಲದೆ ಸಂಪನ್ಮೂಲ ವ್ಯಕ್ತಿಗಳಿಂದ ಹೆಚ್ಚುವರಿ ಭಜನೆಗಳನ್ನು ಕಲಿಸಲು ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಕಾರ್ಯವೆಂದರು.

Advertisement

ಶಾಲಾಡಳಿತ ಮಂಡಳಿ ಸದಸ್ಯೆ ಸಾಯಿರತ್ನಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾಡಳಿತ ಮಂಡಳಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸಂಚಾಲಕ ಯು.ಜಿ. ರಾಧ, ಕಾಳಿಕಾಂಬಾ ಭಜನ ಮಂಡಳಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ, ಪೂರ್ವಾಧ್ಯಕ್ಷ ಕೆ. ಜಗದೀಶ್‌ ಶೆಟ್ಟಿ, ಮಾಧವ ಆಚಾರ್ಯ ಉಪಸ್ಥಿತರಿದ್ದರು.

ಭಜನ ತರಬೇತುದಾರರಾಗಿ ಐ. ಚಿದಾನಂದ ನಾಯಕ್‌, ಯು. ಕೃಷ್ಣ, ಶರತ್‌ ಕೋಟೆ ಭಾಗವಹಿಸಿದ್ದರು. ರೋಹಿಣಿ ಮಾತಾಜಿ ಸ್ವಾಗತಿಸಿ, ಭವ್ಯಾ ವಂದಿಸಿದರು. ವಿಜಿತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next