Advertisement

ಬಜಾಲ್: ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ

11:33 PM Jul 03, 2019 | Team Udayavani |

ಮಹಾನಗರ: ಡಿವೈಎಫ್‌ಐ ಮುಖಂಡರಾಗಿದ್ದ ಶ್ರೀನಿವಾಸ್‌ ಬಜಾಲ್ ಅವರ 17ನೇ ಹುತಾತ್ಮ ದಿನದ ಅಂಗವಾಗಿ ಜೂ. 30 ರಂದು ಡಿವೈಎಫ್‌ಐ ಬಜಾಲ್ ಘಟಕದ ವತಿಯಿಂದ ಬಜಾಲ್ ಸೈಂಟ್ ಜೋಸೆಫ್‌ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮ್ಮಾನ ಹಾಗೂ ರಕ್ತದಾನ ಶಿಬಿರ ನಡೆಯಿತು.

Advertisement

ಶ್ರೀನಿವಾಸ್‌ ಬಜಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸಿ| ಸುನಿತಾ ಸೆರಾವೋ ಮಾತನಾಡಿ, ರಕ್ತದಾನ ಅತ್ಯಂತ ಮಹತ್ವದ್ದಾಗಿದ್ದು ಡಿವೈಎಫ್‌ಐ ಘಟಕ ಇಂತಹ ಒಂದು ಉತ್ತಮ ಕೆಲಸವನ್ನು ವರ್ಷ ಪ್ರತೀ ನಡೆಸಿಕೊಂಡು ಬರು ತ್ತಿರುವುದು ಅಭಿನಂದನಾರ್ಹ ಎಂದರು.

ಡಿವೈಎಫ್‌ಐ ಮುಖಂಡ ಅಶ್ರಫ್‌ ಕೆ.ಸಿ. ರೋಡ್‌ ಮಾತನಾಡಿ, ಹುತಾತ್ಮ ಶ್ರೀನಿವಾಸ್‌ ಬಜಾಲ್ ಸೌಹಾರ್ದ ಸಮಾಜ ಕಟ್ಟುವ ಕನಸಿನೊಂದಿಗೆ ಜಿಲ್ಲೆಯ ಯುವಜನ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಡಿವೈಎಫ್‌ಐ ನಿರತವಾಗಿದ್ದು ಜಿಲ್ಲೆಯಲ್ಲಿ ಸೌಹಾರ್ದ ಸಮಾಜ ಕಟ್ಟುವ ಕೆಲಸವನ್ನು ಮುಂದು ವರಿಸಲಿದೆ ಎಂದು ತಿಳಿಸಿದರು.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಶ್ರೀನಿವಾಸ್‌ ಬಜಾಲ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಮಾಜಿಕ ಮುಖಂಡರಾದ ಸಜಿತ್‌ ಶೆಟ್ಟಿ , ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್‌ ಬಜಾಲ್, ಕಾರ್ಮಿಕ ಮುಖಂಡ ಸುರೇಶ್‌ ಬಜಾಲ್, ಜನತಾ ವ್ಯಾಯಾಮ ಶಾಲೆಯ ಕಾರ್ಯದರ್ಶಿ ದೀಪಕ್‌ ಬಜಾಲ್, ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ನಾಗರಾಜ್‌ ಬಜಾಲ್ ಉಪಸ್ಥಿತರಿದ್ದರು.

Advertisement

ಸಭೆಯ ಅಧ್ಯಕ್ಷತೆಯನ್ನು ಪಕ್ಕಲಡ್ಕ ಡಿವೈಎಫ್‌ಐ ಅಧ್ಯಕ್ಷ ವರಪ್ರಸಾದ್‌ ವಹಿಸಿದ್ದರು. ಪ್ರಕಾಶ್‌ ಶೆಟ್ಟಿ ಸ್ವಾಗತಿಸಿ, ಸಂಜಯ್‌ ಕುಲಾಲ್ ವಂದಿಸಿದರು. ಧೀರಜ್‌ ಪಕ್ಕಲಡ್ಕ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ 50 ಮಂದಿ ಡಿವೈಎಫ್‌ಐ ಕಾರ್ಯಕರ್ತರು ರಕ್ತದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next