ಬೆಂಗಳೂರು: ಬಜಾಜ್ ಆಟೊ ಕಂಪನಿಯು ಎಲ್‌ಇಡಿ ಡಿಆರ್‌ಎಲ್ (ಡೇ ಲೈಟ್ ರನ್ನಿಂಗ್ ಲೈಟ್ಸ್) ಹೊಂದಿರುವ ಹೊಸ ಪ್ಲಾಟಿನ ಕಮ್‌ಫೋರ್‌ಟೆಕ್ ಬೈಕ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಲ್‌ಇಡಿ ಡಿಆರ್‌ಎಲ್ ದೀಪಗಳ ಅಳವಡಿಕೆಯಿಂದ ಬ್ಯಾಟರಿ ಬಳಕೆ ಪ್ರಮಾಣ ಶೇ.88ರಷ್ಟು ಕುಗ್ಗಲಿದ್ದು, ನಾಲ್ಕು ಪಟ್ಟು ದೀರ್ಘ ಕಾಲ ಬಾಳಿಕೆ ಬರಲಿದೆ ಎಂಬ ಹೆಗ್ಗಳಿಕೆ ಪಡೆದಿದೆ.
100 ಸಿಸಿ ಹಾಗೂ 150 ಸಿಸಿ ಶ್ರೇಣಿಯ ಬೈಕ್‌ಗಳಲ್ಲಿ ಎಲ್‌ಇಡಿ ಡಿಆರ್‌ಎಲ್ ಹೊಂದಿರುವ ದೇಶದ ಪ್ರಥಮ ಬೈಕ್ ಎಂದು ಖ್ಯಾತಿ ಪಡೆದಿರುವ ಕಂಪನಿಯ ಈ ನೂತನ ಬೈಕ್‌ಗಳು ಇತರೆ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಆನ್ ಸೌಲಭ್ಯವಿರುವ ಬೈಕ್‌ಗಳಿಗಿಂತ ಹೆಚ್ಚು ಮೈಲೇಜ್ ನೀಡಲಿದ್ದು, ವಿಶ್ವದ ಮೈಲೇಜ್ ಚಾಂಪಿಯನ್ ಎಂಬ ಶ್ರೇಯವನ್ನು ಕಾಯ್ದುಕೊಂಡಿದೆ.
ಎರಡು ಆಕರ್ಷಕ ವರ್ಣಗಳಲ್ಲಿ ಬೈಕ್ ಲಭ್ಯವಿದ್ದು, ದೇಶದ ಎಲ್ಲ ಬಜಾಜ್ ಆಟೊ ಡೀಲರ್‌ಗಳ ಬಳಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಬಜಾಜ್ ಪ್ಲಾಟಿನ ಕಮ್‌ಫೋರ್‌ಟೆಕ್ ಬೈಕ್‌ನಲ್ಲಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಇತರೆ 100 ಸಿಸಿ ಬೈಕ್‌ಗಳ ಕಾರ್ಯಕ್ಷಮತೆಗೆ ಹೋಲಿಸಿದರೆ ಶೇ.20ರಷ್ಟು ಉತ್ತಮವಾಗಿದೆ. ಸುಧಾರಿತ ಸಸ್ಪೆನÒನ್‌ಗಳು ಆರಾಮದಾಯಕ ದೀರ್ಘ ಪ್ರಯಾಣಕ್ಕೆ ಪೂರಕವಾಗಿವೆ.
ನೂತನ ಬೈಕ್‌ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಮೋಟಾರ್‌ಸೈಕಲ್ ಬಿಸಿನೆಸ್ ವಿಭಾಗದ ಅಧ್ಯಕ್ಷ ಎರಿಕ್ ವಾಸ್, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಬಜಾಜ್ ಪ್ಲಾಟಿನ ಕಮ್‌ಫೋರ್‌ಟೆಕ್ ಬೈಕ್ ಅತ್ಯುತ್ತಮವಾಗಿ ರೂಪುಗೊಂಡಿದೆ.
ಸುಖಕರ ಪ್ರಯಾಣ ಸೌಲಭ್ಯ, ಹೆಚ್ಚು ಮೈಲೇಜ್ ಜತೆಗೆ ಎಲ್‌ಇಡಿ ಡಿಆರ್‌ಎಲ್ ದೀಪಗಳು ಬೈಕ್‌ಗೆ ವಿಶೇಷ ಆಕರ್ಷಣೆ ತಂದುಕೊಟ್ಟಿದೆ. ಅತ್ಯಾಕರ್ಷಕ ಗ್ರಾಫಿಕ್, ಹೊಸ ಲುಕ್, ಉತ್ಕೃಷ್ಟ ಗುಣಮಟ್ಟದ ಟೈರ್‌ಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.