Advertisement

ಬಜಾಜ್‌ ಸಂಸ್ಥೆಯ ಹೊಸ ಘೋಷವಾಕ್ಯ ಬಿಡುಗಡೆ

06:27 AM Jan 23, 2019 | Team Udayavani |

ಬೆಂಗಳೂರು: ವಿದೇಶಗಳಿಗೆ ಮೋಟಾರು ವಾಹನ ರಫ್ತು ಮಾಡುವಲ್ಲಿ ಮೊದಲ ಸ್ಥಾನದಲ್ಲಿರುವ ಬಜಾಜ್‌ ಆಟೋ ಲಿಮಿಟೆಡ್‌ ಸಂಸ್ಥೆಯು “ದಿ ವರ್ಲ್ಡ್ಸ್ ಫೇವರೀಟ್‌ ಇಂಡಿಯನ್‌’ ಎಂಬ ಹೊಸ ಘೋಷವಾಕ್ಯ ಬಿಡುಗಡೆಗೊಳಿಸಿದೆ. 2001ರಲ್ಲಿ ಆರಂಭವಾದ ಸಂಸ್ಥೆಯು ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದ ಮುಂಚೂಣಿ ಮೋಟಾರು ವಾಹನಗಳ ರಫ್ತು ಸಂಸ್ಥೆಯಾಗಿ ಬೆಳೆದಿದೆ.

Advertisement

ಅದರಂತೆ ಸಂಸ್ಥೆಯ ಆದಾಯದ ಶೇ.40ರಷ್ಟು ಆದಾಯ ಕೇವಲ ವಿದೇಶಗಳಿಂದಲೇ ಬರುತ್ತಿರುವುದು ವಿಶೇಷ ಸಂಗತಿಯಾಗಿದೆ. ಆ ಹಿನ್ನೆಲೆಯಲ್ಲಿ ಸೋಮವಾರ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ನೀತಿ ಆಯೋಗದ ಸಿಇಒ ಅಮಿತಾಬ್‌ ಕೇತ್‌ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಬಜಾಜ್‌ ಹೊಸ ಘೋಷವಾಕ್ಯ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ರಾಜೀವ್‌ ಬಜಾಜ್‌ ಅವರ, ಸಂಸ್ಥೆಯಿಂದ ಈವರೆಗೆ 15 ದಶಲಕ್ಷ ಮೋಟಾರು ವಾಹನಗಳನ್ನು ಸುಮಾರು 70 ದೇಶಗಳಿಗೆ ಮಾರಾಟ ಮಾಡುವ ಮೂಲಕ ಸರ್ಕಾರದ ಮೇಕ್‌ ಇನ್‌ ಇಂಡಿಯಾಗೆ ವಿಶೇಷ ಮಾನ್ಯತೆ ತಂದುಕೊಟ್ಟಿದೆ. ಸಂಸ್ಥೆಯು ಕಾಲಕಾಲಕ್ಕೆ ಹೊಸ ವಿನ್ಯಾಸ, ತಂತ್ರಜ್ಞಾನ, ಗುಣಮಟ್ಟ ಹಾಗೂ ಗ್ರಾಹಕರ ಅಭಿವ್ಯಕ್ತಿಗೆ ಅನುಗುಣವಾಗಿ ಮೋಟಾರು ವಾಹನಗಳನ್ನು ಉತ್ಪಾದಿಸಿದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. 

ಬಜಾಜ್‌ ಸಂಸ್ಥೆಯು ಆರಂಭವಾಗಿ ಕೇವಲ 17 ವರ್ಷಗಳಲ್ಲಿಯೇ ಅತಿಹೆಚ್ಚು ಮೋಟಾರು ವಾಹನ ಉತ್ಪಾದಿಸುವ ವಿಶ್ವದ ಮೂರನೇ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ ಭಾರತದಿಂದ ರಫ್ತಾಗುತ್ತಿರುವ ಪ್ರತಿ ಮೂರು ಮೋಟಾರು ವಾಹನಗಳಲ್ಲಿ ಬಜಾಜ್‌ ಸಂಸ್ಥೆಯದ್ದೆ ಎರಡು ವಾಹನಗಳಿಗೆ ಎಂಬುದು ಸಂತಸದ ಸಂಗತಿ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next