ಮುಂಬೈ: ಬಜಾಜ್ ಆಟೋ ತನ್ನ ಬಹು ನಿರೀಕ್ಷಿತ ಬಜಾಜ್ ಫ್ರೀಡಂ 125 ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ಶುಕ್ರವಾರ (ಜುಲೈ 05) ಬಿಡುಗಡೆಗೊಳಿಸಿದೆ. ಇದು ಪೆಟ್ರೋಲ್ ಚಾಲಿತವಾಗಿದ್ದರೂ ಕೂಡಾ ಸಿಎನ್ ಜಿ(CNG) ಆಯ್ಕೆ ಕೂಡಾ ಹೊಂದಿರುವುದಾಗಿ ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ:Pune Porsche crash; 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ ಬಾಲಾಪರಾಧಿ
ಬಜಾಜ್ ಫ್ರೀಡಂ 125ನ NGO4 Drum ಬೈಕ್ ಬೆಲೆ 95,000 ಸಾವಿರ ರೂಪಾಯಿಯಿಂದ ಆರಂಭಗೊಳ್ಳಲಿದ್ದು, Mid Spec NGO4 Drum LED ಬೆಲೆ 1.05 ಲಕ್ಷ ರೂಪಾಯಿ, Top Spec NGO4 Disc LED ಬೆಲೆ 1.10 ಲಕ್ಷ ರೂಪಾಯಿ (ಇವೆಲ್ಲವು ex ಶೋರೂಂ ಬೆಲೆಗಳು) ಎಂದು ಕಂಪನಿ ಮಾಹಿತಿ ನೀಡಿದೆ.
ವಾಹನ ಖರೀದಿದಾರರಿಗೆ ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಬುಕ್ಕಿಂಗ್ ಆರಂಭಗೊಂಡಿದ್ದು, ದೇಶದ ಇನ್ನುಳಿದ ಭಾಗದಲ್ಲಿ ಮುಂದಿನ ಮೂರು ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಬಜಾಜ್ ತಿಳಿಸಿದೆ.
ಫ್ರೀಡಂ 125 ಬೈಕ್ 125 ಸಿಸಿ ಎಂಜಿನ್ ಹೊಂದಿದ್ದು, ಅದು 9.5hp ಪವರ್ ಪ್ರೊಡ್ಯೂಸ್ ಮಾಡಲಿದೆ ಮತ್ತು 9.7 NM of peak torque ಹೊಂದಿದೆ. ಬೈಕ್ ನಲ್ಲಿ 2 ಲೀಟರ್ ಪೆಟ್ರೋಲ್ ಟ್ಯಾಂಕ್ ಹಾಗೂ 2 ಕೆಜಿ ಸಿಎನ್ ಜಿ ಟ್ಯಾಂಕ್ ಅನ್ನು ಒಳಗೊಂಡಿದೆ.
ಫ್ರೀಡಂ 125 ಬೈಕ್ ಓಡಿಸುತ್ತಿರುವ ಸಂದರ್ಭದಲ್ಲೇ ಪೆಟ್ರೋಲ್ ನಿಂದ ಸಿಎನ್ ಜಿಗೆ ಸ್ವಿಚ್ಚಿಂಗ್ ಆಗುವ ಆಯ್ಕೆಯನ್ನು ಹೊಂದಿದೆ. ಇಂಧನ ಕ್ಯಾಪ್ ಕವರ್ ಸಿಎನ್ ಜಿ ಮತ್ತು ಪೆಟ್ರೋಲ್ ರೀ ಫಿಲ್ಲಿಂಗ್ ಒಂದೇ ಮಾದರಿಯನ್ನು ಹೊಂದಿದೆ.