ಬಜಾಜ್ ತನ್ನ ಡೋಮಿನಾರ್ 400 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಡೋಮಿನಾರ್ 400 ಬೈಕಿನ ಬಗ್ಗೆ ಬಹಿರಂಗವಾದ ಮಾಹಿತಿ ಪ್ರಕಾರ ಈ ಬೈಕಿನಲ್ಲಿ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ…, ಡಿಒಎಚ್‌ಸಿ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 8,800 ಆರ್‌ಪಿಎಂನಲ್ಲಿ 39.4 ಬಿಚ್‌ಪ್ಪಿ ಪವರ್ ಮತ್ತು 7000 ಆರ್‌ಪಿಎಂನಲ್ಲಿ 35 ಎನ್‌ಎಂ ಟಾರ್ಕ್, 6 ಗೇರ್‌ಗಲಿವೆ.
ಬಿಎಸ್-6ನ ಎಲ್ಲಾ ವಾಹನಗಳ ಬೆಲೆ ಹೆಚ್ಚಿರುವುದರಿಂದ ಡೋಮಿನಾರ್ 400ಕೂಡ ಬೈಕ್ ಇದಕ್ಕೆ ಹೊರತಲ್ಲ. ಬಿಎಎಸ್-6 ಡೋಮಿನಾರ್ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ 1.90 ಲಕ್ಷ ರೂ. ಲಕ್ಷ ಇರುವ ಸಾಧ್ಯತೆ ಇದೆ. ಅನ್‌ರೋಡ್ 2.35 ಲಕ್ಷ ರೂ.ಗಳಾಗಿರಲಿದೆ. 2019ರ ಮಾರ್ಚ್‌ನಲ್ಲಿ ಡೋಮಿನಾರ್ 400 ಬೆಲೆಯನ್ನು 10,000 ರೂ. ಹೆಚ್ಚಿಸಿತ್ತು.
ಬಿಎಸ್-6 ಡೋಮಿನಾರ್ 400 ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಡ್ಯುಯಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಇದೆ. ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ರೆಡ್ ಮತ್ತು ವೈಟ್ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಬೈಕ್ ಅನ್ನು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ನವೀಕರಿ ಸಲಾಗುವುದಿಲ್ಲ.
ಬಜಾಜ್ ಡೊಮಿನಾರ್ 250 ಬೈಕಿನಲ್ಲಿ 248.8 ಸಿಸಿಯ ಲಿಕ್ವಿಡ್ ಕೂಲ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 27 ಬಿಎಚ್‌ಪಿ ಪವರ್ ಹಾಗೂ 23.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.