Advertisement

ವಿದ್ಯುತ್‌ ಚಾಲಿತ ವಾಹನ: ಬಜಾಜ್‌ನಿಂದ 300 ಕೋಟಿ ರೂ. ಹೂಡಿಕೆ

07:09 PM Dec 29, 2021 | Team Udayavani |

ಪುಣೆ: ದೇಶದ ಪ್ರಮುಖ ವಾಹನ ಉತ್ಪಾದನಾ ಕಂಪೆನಿ, ಬಜಾಜ್‌ ಅಟೋ ಲಿಮಿಟೆಡ್‌ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳ ನಿರ್ಮಾಣಕ್ಕೆ ನಿರ್ಧರಿಸಿದೆ. ಅದಕ್ಕಾಗಿ ಪುಣೆಯ ಅರ್ಕುಡಿಯಲ್ಲಿ 300 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಮುಂದಾಗಿದೆ.

Advertisement

ಈ ಹಿಂದೆ ಇದೇ ಸ್ಥಾವರದಲ್ಲಿ ಬಜಾಜ್‌ನ ಜನಪ್ರಿಯ ಚೇತಕ್‌ ಸ್ಕೂಟರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು.

ಪ್ರತಿ ವರ್ಷ 5 ಲಕ್ಷ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಲು ಬಜಾಜ್‌ ಗುರಿ ಹಾಕಿಕೊಂಡಿದೆ.

ಪೂರ್ಣ ಪ್ರಮಾಣದಲ್ಲಿ ಸ್ವಯಂಚಾಲಿತವಾಗಿರುವ ಘಟಕವನ್ನು ಸ್ಥಾಪಿಸಲಾಗುತ್ತದೆ. 800 ಮಂದಿಗೆ ಹೊಸ ಘಟಕದಲ್ಲಿ ಉದ್ಯೋಗ ಸಿಗಲಿದೆ.

ಇದನ್ನೂ ಓದಿ:ಅಮ್ಮನ ನೆನಪು ಕಮಲಮ್ಮ ಪುಸ್ತಕ: ಗೃಹ ಸಚಿವ ಆರಗ ಜ್ಞಾನೇಂದ್ರ ರಿಂದ ಬಿಡುಗಡೆ

Advertisement

2022ರ ಜೂನ್‌ಗೆ ಮೊದಲ ವಾಹನ ಸ್ಥಾವರದಲ್ಲಿ ಉತ್ಪಾದನೆಯಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next