ಮುಂಬೈ: ಬಜಾಜ್ ಅಟೋ ಲಿಮಿಟೆಡ್‌ನ 25 ಲಕ್ಷ ಬೈಕ್‌ಗಳು 2021ರಲ್ಲಿ ಮಾರಾಟವಾಗಿವೆ.
ವಿದೇಶಗಳ ಮಾರುಕಟ್ಟೆಯಲ್ಲಿ ವಿಶೇಷವಾಗಿ ಪಲ್ಸರ್, ಡೊಮಿನಾರ್, ಬಾಕ್ಸರ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. 2020 ಕ್ಯಾಲೆಂಡರ್ ವರ್ಷಕ್ಕೆ ಹೋಲಿಕೆ ಮಾಡಿಕೊಂಡರೆ ಕಳೆದ ವರ್ಷ ಶೇ.30ರಷ್ಟು ರಫ್ತು ಹೆಚ್ಚಾಗಿದೆ.
ತ್ರಿ ಚಕ್ರ ವಾಹನಗಳ ವಿಭಾಗದಲ್ಲಿ ಕಂಪನಿ 3 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಇದರಿಂದಾಗಿ ಕಳೆದ ವರ್ಷ ಕೊರೊನಾ ಆತಂಕ ಇದ್ದ ಹೊರತಾಗಿಯೂ ವಾಹನಗಳ ಮಾರಾಟದಲ್ಲಿ ಚೇತರಿಕೆ ಕಂಡಿತ್ತು ಎಂಬ ಅಂಶ ಸ್ಪಷ್ಟವಾಗಿದೆ.
ಇದನ್ನೂ ಓದಿ:ಈ ತಿಂಗಳ 20 ರೊಳಗೆ ಸಂಪುಟ ಬದಲಾವಣೆ ಖಚಿತ: ಮತ್ತೆ ಯತ್ನಾಳ್ ಗುಡುಗು
ಕಂಪನಿ ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದ್ವಿಚಕ್ರ ವಾಹನಗಳ ಪೈಕಿ 125 ಸಿಸಿ ಸಾಮರ್ಥ್ಯದ ವಾಹನಗಳ ಪ್ರಮಾಣವೇ ಶೇ.41 ಆಗಿತ್ತು. ಕಂಪನಿಯ ಮೋಟರ್ ಸೈಕಲ್‌ಗಳ ಪೈಕಿ ಪಲ್ಸರ್ ವಾಹನವೇ ಹೆಚ್ಚು ಬೇಡಿಕೆ ಉಳಿಸಿಕೊಂಡಿದೆ.
ಕೊಲಂಬಿಯಾ, ಮೆಕ್ಸಿಕೋ, ಅರ್ಜೆಂಟೀನಾ, ಗ್ವಾಟೆಮಾಲಾ, ಬಾಂಗ್ಲಾದೇಶ, ನೇಪಾಳ, ಈಜಿಪ್ಟ್ ಗಳಲ್ಲಿ ಬಜಾಜ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ.