Advertisement

ಬಜೆ ಡ್ಯಾಂ ಹೂಳೆತ್ತುವ ಕಾಮಗಾರಿ ಸ್ಥಗಿತ

12:55 PM Apr 06, 2020 | Sriram |

ಉಡುಪಿ: ನಗರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಸರಬರಾಜು ಮೂಲವಾದ ಸ್ವರ್ಣಾ ನದಿಯ ಬಜೆ ಜಲಾಶಯದ ಹೂಳೆತ್ತುವ ಕಾಮಗಾರಿಗೆ ಕೋವಿಡ್ 19 ಭೀತಿ ಎದುರಾಗಿದ್ದು, ಹೂಳೆತ್ತುವ ಕಾರ್ಯ ಸ್ಥಗಿತವಾಗಿದೆ.

Advertisement

ನಗರಕ್ಕೆ ಕುಡಿಯುವ ನೀರು ಪೂರೈಸುವ ಸ್ವರ್ಣಾ ನದಿಯಲ್ಲಿ ಕಳೆದ ಒಂದು ದಶಕದಿಂದ ತುಂಬಿರುವ ಹೂಳು ತೆರವುಗೊಳಿಸು ಕಾರ್ಯಕ್ಕೆ ಕಳೆದ ವರ್ಷಾಂತ್ಯದಲ್ಲಿ ಚಾಲನೆ ನೀಡಲಾಗಿತ್ತು. ಸ್ವರ್ಣಾ ನದಿಯ 7 ಕಿ.ಮೀ.ವ್ಯಾಪ್ತಿಯಲ್ಲಿ 2.25 ಕೋ.ರೂ. ವೆಚ್ಚದಲ್ಲಿ ಹೂಳು ತೆಗೆಯಲು ಪ್ರತ್ಯೇಕ ಟೆಂಡರ್‌ ಕರೆಯಲಾಗಿತ್ತು. ಗುತ್ತಿಗೆ ಸಂಸ್ಥೆಯು 42,92,250 ರೂ.ಗಳಿಗೆವಹಿಸಿಕೊಂಡಿದೆ. ಮಾಣಾç ಸೇತುವೆಯಿಂದ ಮೇಲಾ^ಗದಲ್ಲಿ ಶೀರೂರು ಮಠದ ಪ್ರದೇಶದವರೆಗೆ 3.2 ಕಿ.ಮೀ. ವ್ಯಾಪ್ತಿಯಲ್ಲಿ ಹೂಳು ತೆರವಿಗೆ 1 ಕೋ.ರೂ.ಗಳಿಗೆ ಅಂದಾಜುಪಟ್ಟಿ ಸಿದ್ಧಪಡಿಸಲಾಗಿತ್ತು. ಗುತ್ತಿಗೆ ಸಂಸ್ಥೆಯು 70.92 ಲ.ರೂ. ಮೊತ್ತದ ಟೆಂಡರ್‌ ಒಪ್ಪಂದ ಮಾಡಿಕೊಂಡಿತ್ತು.

ಕಳೆದ 4 ತಿಂಗಳ ಹಿಂದೆ ಖಾಸಗಿ ಕಂಪೆನಿ ಹೂಳೆತ್ತುವ ಕಾಮಗಾರಿಗೆ ಪ್ರಾರಂಭಿಸಿದ್ದು, ಸದ್ಯ ಶೀರೂರು ಮಠದ ಹತ್ತಿರ ನದಿಯ ಮಧ್ಯದಲ್ಲಿ
ರುವ ದಿಬ್ಬದ ತೆರವು ಕಾಮಗಾರಿ ನಡೆಯುತ್ತಿತ್ತು. ಹೂಳನ್ನು ಸಂಗ್ರಹಿಸಲು ಹಿರಿಯಡ್ಕ ಬೊಮ್ಮರಬೆಟ್ಟು ಪಂಚಾಯತ್‌ ಕಟ್ಟಡದ ಹಿಂಭಾಗದ ಗಾಂಧಿ ಮೈದಾನದಲ್ಲಿ 20 ಲ.ರೂ. ವೆಚ್ಚದಲ್ಲಿ ಸ್ಟಾಕ್‌ ಯಾರ್ಡ್‌ ನಿರ್ಮಿಸಲಾಗಿದೆ. ಸ್ಟಾಕ್‌ ಯಾರ್ಡ್‌ಗೆ ಜಿಯೋ ಫೆನ್ಸಿಂಗ್‌ ಅಳವಡಿಸಲಾಗಿದ್ದು, ಉತ್ತಮ ಗುಣಮಟ್ಟದ ಮರಳನ್ನು ಇಲ್ಲಿ ಸಂಗ್ರಹಿಸಲಾಗುತ್ತಿದೆ.

ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ಬರಲು ಸಾಧ್ಯವಾಗುತ್ತಿಲ್ಲ. ಪೊಲೀಸ್‌ ಇಲಾಖೆಯೊಂದಿಗೆ ಮಾತನಾಡಿ ಕಾರ್ಮಿಕರಿಗೆ ಗುರುತಿನ ಚೀಟಿ ಒದಗಿಸಿ ಕಾಮಗಾರಿ ಮುಂದುವರಿಸಲಾಗುವುದು.
– ಮೋಹನ್‌ ರಾಜ್‌,
ಎಇಇ, ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next