Advertisement

ಬೈರಾಪುರ ಗ್ರಾಪಂಗೆ 6 ವರ್ಷದಿಂದ ಅರ್ಜಿ ಕೊಟ್ಟರೂ ಸಿಗದ ವಸತಿ

01:25 PM Feb 01, 2022 | Team Udayavani |

ಆಲೂರು: ಸರ್ಕಾರದ ವಸತಿ ಯೋಜನೆಯಡಿ ಮನೆ ಮಂಜೂರಾತಿಗೆ ಕಳೆದ ಐದಾರು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿಯ ಕುಟುಂಬವೊಂದು ಪುಟ್ಟ ಮಕ್ಕಳೊಂದಿಗೆ ತಾಲೂಕಿನ ಬೈರಾಪುರ ಗ್ರಾಪಂ ಕಚೇರಿಗೆ ಅಲೆದಾಡುತ್ತಿದ್ದರೂ ಸೂರು ಕೈಗೆಟುಕದಂತಾಗಿದೆ.

Advertisement

ಬೈರಾಪುರ ಗ್ರಾಪಂಗೆ ಅರ್ಜಿ: ತಾಲೂಕಿನ ಬೈರಾಪುರ ಗ್ರಾಮದ ನಿವಾಸಿ ಲೋಕೇಶ್‌ ಕಳೆದೊಂದುವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದಬಳಲುತ್ತಿದ್ದು ಬೈರಾಪುರ ಗ್ರಾಪಂ ಕಚೇರಿಗೆ ಅರ್ಜಿನೀಡುತ್ತಿದ್ದಾರೆ. ಆದರೆ, ಸರ್ಕಾರದಿಂದ ಬಂದಮನೆಗಳನ್ನು ಪಿಡಿಒ, ಜನಪ್ರತಿನಿಧಿಗಳು ಹಣದಾಸೆಗಾಗಿಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಂದೆ-ತಾಯಿ ಇಲ್ಲದ ಲೋಕೇಶ್‌ ಅವರಿಗೆ 2ಬಾರಿ ಹೃದಯ ಸಂಬಂಧಿ ಕಾಯಿಲೆಯ ಸರ್ಜರಆಗಿದೆ. ಕಿತ್ತು ತಿನ್ನುವ ಬಡತನ, ಮನೆ ಜಮೀನು ಇಲ್ಲದ ಇವರಿಗೆ ಅಜ್ಜಿಯೇ ಆಶ್ರಯವಾಗಿದ್ದು ತಾತ್ಕಾಲಿಕವಾಗಿ ಇವರ ಮನೆಯಲ್ಲಿ ವಾಸವಾಗಿದ್ದಾರೆ.

ಹಣ ಪಡೆದರೂ ವಸತಿ ನೀಡಿಲ್ಲ: ಬಡವರನ್ನು ಗುರುತಿಸಿ ಮನೆ ನೀಡುವ ಸಲುವಾಗಿ ಸೋಮವಾರಕರೆದಿದ್ದ ಗ್ರಾಮ ಸಭೆಯಲ್ಲಿ ಅಧಿಕಾರಿಗಳು ಇವರಿಗೆನೀಡಬೇಕಾಗಿದ್ದ ಮನೆಯನ್ನು ಬೇರೆಯವರಿಗೆ ನೀಡಿದ್ದುಕುಟುಂಬಸ್ಥರು ಸಭೆಯಲ್ಲಿ ನಮಗೆ ಮನೆ ನೀಡದಿದ್ದರೆಇಡೀ ಕುಟುಂಬ ಸಭೆಯಲ್ಲಿಯೇ ವಿಷಪ್ರಾಸನ ಮಾಡುವುದಾಗಿ ಎಚ್ಚರಿಸಿದರು.

ಲೋಕೇಶ್‌ ಪತ್ನಿ ವಿನುತಾ ಮಾತನಾಡಿ, ಕಳೆದ 5-6 ವರ್ಷಗಳಿಂದ ಮನೆ ನೀಡುವಂತೆ ಅರ್ಜಿ ಕೊಡಲಾಗಿದೆ.ಆದರೆ ಸರ್ಕಾರದಿಂದ ಮನೆ ಬಂದ ಸಂದರ್ಭದಲ್ಲಿ ಇಲ್ಲಿಯ ಅಭಿವೃದ್ಧಿ ಅಧಿಕಾರಿಗಳು ಹಣಕ್ಕಾಗಿ ಉಳ್ಳವರಿಗೆ ಮನೆ ನೀಡುತ್ತಿದ್ದಾರೆ. ಇತ್ತೀಚಿಗೆ ಪತಿಗೆ 2 ಬಾರಿ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ನಡೆದಿದೆ. ಬಡತನದಲ್ಲಿ ಬೆಂದು ಹೋಗಿದ್ದೇವೆ. ನಮ್ಮಗಳಿಗೆ ಏನು ಮಾಡಬೇಕೆಂದು ತೋಚದಾಗಿದೆ ಎಂದರು.

ಕೆಲವು ಭ್ರಷ್ಟ ಅಧಿಕಾರಿಗಳು ಪಂಚಾಯ್ತಿಯಲ್ಲಿದ್ದು ಕೂಡಲೇ ವರ್ಗಾವಣೆ ಮಾಡಬೇಕು. ಲೋಕೇಶ್‌ಕುಟುಂಬಕ್ಕೆ ಮನೆ ಕೊಡದಿದ್ದರೆ ಗ್ರಾಪಂ ಮುಂದೆಪ್ರತಿಭಟನೆ ಮಾಡಲಾಗುವುದೆಂದು ಸ್ಥಳೀಯರು ಎಚ್ಚರಿಸಿದರು.

Advertisement

ಪರಿಶೀಲನೆ ನಡೆಯುತ್ತಿದೆ :

ಸಭೆಯಲ್ಲಿ ಬೈರಾಪುರ ಗ್ರಾಮದ ಲೋಕೇಶ್‌ರ ಪತ್ನಿ ವಿನುತಾ ಕಣ್ಣೀರು ಹಾಕಿದ್ದು ನನ್ನ ಗಮನಕ್ಕೆ ಬಂದಿದೆ. ಅವರು ಬಡವರಾಗಿದ್ದು ಮನೆ ಪಡೆಯುವ ಎಲ್ಲಾ ಅರ್ಹತೆ ಹೊಂದಿದ್ದಾರೆ.ಈಗಾಗಲೇ ಅಧ್ಯಕ್ಷರ ಜತೆ ಮಾತನಾಡಿ ಮನೆ ನಿರ್ಮಿಸಿ ಕೊಡಲುತೀರ್ಮಾನಿಸಲಾಗಿದೆ. ಪಟ್ಟಿಯಲ್ಲಿರುವ ಫ‌ಲಾನು ಭವಿಗಳ ಸ್ಥಳ ಪರಿಶೀಲನೆ ನಡೆಯುತ್ತಿದೆ. ಅದರಲ್ಲಿ ಯಾವು ದಾದರೂ ಮನೆ ನೀಡಲಾಗುವುದು ಎಂದು ಪಿಡಿಒ ಭವ್ಯಾ ತಿಳಿಸಿದ್ದಾರೆ.

ಅಜ್ಜಿ ಲಕ್ಷ್ಮಮ್ಮ ಮನೆ ಮಾಡಿಕೊಳ್ಳುವ ಸಲುವಾಗಿ 2 ಗುಂಟೆ ಜಾಗವನ್ನು ನಮ್ಮ ಹೆಸರಿಗೆಮಾಡಿಕೊಟ್ಟಿದ್ದಾರೆ. ನಮಗೆ ಈ ಬಾರಿ ಮನೆನೀಡಬೇಕು, ಇಲ್ಲದಿದ್ದರೆ ನಾವು ಅಭಿವೃದ್ಧಿ ಅಧಿಕಾರಿ ಹೆಸರು ಬರೆದಿಟ್ಟು ಸಾಮೂಹಿಕವಾಗಿ ಆತ್ಮಹತ್ಯೆಮಾಡಿಕೊಳ್ಳುತ್ತೇವೆ. -ವಿನುತಾ, ಲೋಕೇಶ್‌ಪತ್ನಿ

Advertisement

Udayavani is now on Telegram. Click here to join our channel and stay updated with the latest news.

Next