Advertisement

ಬೈನೇನಹಳ್ಳಿ ಗ್ರಾಮ ಸೀಲ್‌ಡೌನ್‌

06:23 AM May 16, 2020 | Lakshmi GovindaRaj |

ಬೇತಮಂಗಲ/ಕೆಜಿಎಫ್: ತಾಲೂಕಿನ ಬೈನೇನಹಳ್ಳಿಯ ಯುವಕನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನ 7 ಕಿ.ಮೀ. ಪ್ರದೇಶವನ್ನು ಬಫ‌ರ್‌ ಜೋನ್‌ ಎಂದು ಘೋಷಿಸಲಾಗಿದೆ.

Advertisement

ಮಾರಿಕುಪ್ಪ ಪೊಲೀಸ್‌ ಠಾಣೆ ವ್ಯಾಪ್ತಿಯ ಬೈನೇನಹಳ್ಳಿ ಗ್ರಾಮದ 25 ವರ್ಷದ ಹುಲ್ಲು ವ್ಯಾಪಾರ ಮಾಡುತ್ತಿದ್ದ ಲಾರಿ ಚಾಲಕನಿಗೆ ಕೊರೊನಾ ಸೋಂಕು ಇರುವುದನ್ನು ಜಿಲ್ಲಾಡಳಿತ ಖಚಿತಪಡಿಸುತ್ತಿದ್ದಂತೆ ಗ್ರಾಮದ 4 ಭಾಗಗಳಲ್ಲಿ ನಾಕ  ಬಂದಿ ಮಾಡುವ ಮೂಲಕ ಗ್ರಾಮವನ್ನು ಸೀಲ್‌ ಡೌನ್‌ ಮಾಡಲಾಯಿತು. 300 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಗ್ರಾಮಸ್ಥರನ್ನು ಆತಂಕಕ್ಕೆ ನೂಕಿದೆ.

ರೋಗಿ ಸಂಖ್ಯೆ 992 ಮನೆಯ  100 ಮೀಟರ್‌ ವ್ಯಾಪ್ತಿಯಲ್ಲಿ ಬರುವ 90 ಮನೆ, 4 ಅಂಗಡಿ ಸೇರಿ 373 ಜನರು ಕಂಟೇನ್‌ಮೆಂಟ್‌ ಜೋನ್‌ನಲ್ಲಿ ಇದ್ದಾರೆ. ಗ್ರಾಮದ ಪೂರ್ವಕ್ಕೆ ಬರುವ ಆಲಿಕಲ್ಲು-ಕರೂರು ಗ್ರಾಮ, ಪಶ್ಚಿಮಕ್ಕೆ ಮಾರಿಕುಪ್ಪಂ ವಾರ್ಡ್‌ ನಂಬರ್‌ 10, ಉತ್ತರಕ್ಕೆ  ಎಂ.ಜಿ.ಮಾರುಕಟ್ಟೆ ವಾರ್ಡ್‌ 25 ಮತ್ತು ದಕ್ಷಿಣಕ್ಕೆ ಕೆಂಪಾಪುರ ಗ್ರಾಮದ ಗಡಿ ಅನ್ನು ಬಫ‌ರ್‌ಜೋನ್‌ ಎಂದು ಗುರುತಿಸಲಾಗಿದೆ.

ಕಂಟೇನ್‌ಮೆಂಟ್‌ ಜೋನ್‌ ಗಡಿಯಾಗಿ ಪೂರ್ವಕ್ಕೆ ದೊಡ್ಡಕಲ್ಲಹಳ್ಳಿ ಗಡಿ, ಪಶ್ಚಿಮಕ್ಕೆ ಕೆಜಿಎಫ್ -ಕುಪ್ಪಂ  ಮುಖ್ಯ ರಸ್ತೆ, ಉತ್ತರಕ್ಕೆ ಕೊತ್ತೂರು ಗ್ರಾಮ, ದಕ್ಷಿಣಕ್ಕೆ ಕೊಡಿಗೇನಹಳ್ಳಿ ಗ್ರಾಮ ಗುರುತಿಸಲಾಗಿದೆ. ಸಮಾಜ ಕಲ್ಯಾಣ ಅಧಿಕಾರಿ ಮುನಿರಾಜು ಕಂಟೇನ್‌ಮೆಂಟ್‌ ಅಧಿಕಾರಿ ಮತ್ತು ಇನ್ಸಿಡೆಂಟ್‌ ಕಮಾಂಡರ್‌ ಆಗಿದ್ದಾರೆ. ಲಾರಿ ಚಾಲಕನ  ಸಂರ್ಪಕದಲ್ಲಿ ಇದ್ದ 12 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದ್ದು, ಅವರ ಗಂಟಲು ದ್ರವದ ಮಾದರಿಗಳನ್ನು ಪಡೆದು ಲ್ಯಾಬ್‌ಗಕಳುಹಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next