Advertisement

ಬೈಲೂರು ಶ್ರೀ ಧೂಮಾವತಿ ದೈವಸ್ಥಾನ; ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಸಂಪನ್ನ

10:33 AM Mar 18, 2023 | Team Udayavani |

ಉಡುಪಿ: ಬೈಲೂರು ಶ್ರೀ ಮಹಿಷಮರ್ದಿನಿ ದೇಗುಲಕ್ಕೆ ಸಂಬಂಧಪಟ್ಟ ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶುಕ್ರವಾರ ಆದ್ಯ ಗಣಯಾಗ, ಪ್ರತಿಷ್ಠಾ ಪ್ರಧಾನ ಹೋಮ, 108 ಕಲಶಾಭಿಷೇಕ, ದೈವಗಳ ಪ್ರತಿಷ್ಠೆ, ಬ್ರಹ್ಮಕಲಾಭಿಷೇಕ, ನೇಮ, ಚಪ್ಪರ ಮುಹೂರ್ತ, ದೈವ ದರ್ಶನ, ಅನ್ನಸಂತರ್ಪಣೆಯು ತಂತ್ರಿಗಳಾದ ವೇ|ಮೂ| ವಿ| ಕೆ.ಎ. ರಮಣ ತಂತ್ರಿ ಕೊರಂಗ್ರಪಾಡಿ, ವೇ|ಮೂ| ವಿ| ಕೆ.ಎಸ್‌. ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ ಅವರ ನೇತೃತ್ವದಲ್ಲಿ ನಡೆಯಿತು.

Advertisement

ಇದನ್ನೂ ಓದಿ:ನ್ಯಾಯಾಂಗದ ಮೇಲೆ ನಂಬಿಕೆಯಿರಲಿ; ಅದಾನಿ ಪ್ರಕರಣದ ಬಗ್ಗೆ ಕೊನೆಗೂ ಮೌನ ಮುರಿದ ಅಮಿತ್ ಶಾ

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದೇಗುಲದ ಆಡಳಿತ ಮೊಕ್ತೇಸರ ಮೋಹನ ಮುದ್ದಣ ಶೆಟ್ಟಿ, ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ನವೀನ್‌ ಭಂಡಾರಿ, ಪ್ರಧಾನ ಕಾರ್ಯದರ್ಶಿ ಕಿರಣ್‌ ಕುಮಾರ್‌ ಬೈಲೂರು, ಉಪಾಧ್ಯಕ್ಷ ಸದಾನಂದ ಶೆಟ್ಟಿ, ಆರ್ಥಿಕ ಸಮಿತಿಯ ರಮೇಶ್‌ ಶೆಟ್ಟಿ ಕಳತ್ತೂರು, ಮಾಣಿಪಾಡಿ ರತ್ನಾಕರ ಎನ್‌. ಶೆಟ್ಟಿ, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್‌ ಶೆಟ್ಟಿಗಾರ್‌, ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಸಮಿತಿ ಕೋಶಾಧಿಕಾರಿ ಸುದರ್ಶನ ಶೇರಿಗಾರ್‌, ದೈವಸ್ಥಾನದ ಸ್ಥಳದಾನಿ ಸದಾನಂದ ಶೆಟ್ಟಿ ಬೈಲೂರು ಮೂಡುಮನೆ, ಗುರಿಕಾರ ಪಡುಮನೆ ಮೂಡುಮನೆ ದಿನೇಶ ಶೆಟ್ಟಿ ಬೈಲೂರು, ದೇವಸ್ಥಾನ ಮತ್ತು ದೈವಸ್ಥಾನದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next