Advertisement
ಸುಮಾರು 3 ಕಿ.ಮೀ.ಯಷ್ಟು ಉದ್ದ ವಿರುವ ಈ ರಸ್ತೆಯ ಅರ್ಧ ಕಿ.ಮೀ ಭಾಗಕ್ಕೆ ಸುಮಾರು 15 ವರ್ಷಗಳ ಹಿಂದೆ ಡಾಮಾರು ಮಾಡಲಾಗಿತ್ತಾದರೂ ಅದು ಈಗ ಸಂಪೂರ್ಣ ಕಿತ್ತು ಹೋಗಿದ್ದು, ರಸ್ತೆ ಹೊಂಡಗುಂಡಿಗಳಿಂದ ಕೂಡಿದೆ.
ರಸ್ತೆಯ ಇಕ್ಕೆಲಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ನೀರು ರಸ್ತೆಯಲ್ಲಿಯೇ ಹರಿಯು ತ್ತಿದೆ. ಅಲ್ಲದೆ ರಸ್ತೆಯ ಹೊಂಡಗಳಲ್ಲಿ ನೀರು ನಿಂತಿರುವುದರಿಂದ ವಾಹನ ಸಂಚಾರರು ಅಪಘಾತಕ್ಕೆ ಈಡಾಗುತ್ತಿದ್ದಾರೆ.
Related Articles
ರಸ್ತೆಯ ಇಕ್ಕೆಲಗಳಲ್ಲಿರುವ ಗಿಡ ಮರ ಗಳು ರಸ್ತೆಗೆ ಬಾಗಿಕೊಂಡಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಪ್ರಯೋಜನಕ್ಕೆ ಬಾರದ ಸೇತುವೆ ಈ ರಸ್ತೆಯಲ್ಲಿಯೇ ಇರುವ ನದಿಗೆ ಸುಸಜ್ಜಿತ ಸೇತುವೆ ನಿರ್ಮಾಣವಾಗಿದೆ ಯಾದರೂ ಸಂಪೂರ್ಣ ಹದಗೆಟ್ಟ ರಸ್ತೆಯಿಂದಾಗಿ ಸೇತುವೆ ಪ್ರಯೋಜನಕ್ಕೆ ಬಾರದಂತಾಗಿದೆ. ಜನರ ಬೇಡಿಕೆಯಂತೆ ಸೇತುವೆ ನಿರ್ಮಾಣವಾಗಿದ್ದು, ಜತೆಗೆ ರಸ್ತೆಯೂ ಅಭಿವೃದ್ಧಿಗೊಂಡಲ್ಲಿ ಸ್ಥಳೀಯರಿಗೆ ಬಹಳಷ್ಟು ಅನುಕೂಲವಾಗಬಹುದಾಗಿದೆ.
Advertisement
ಹಲವು ಬಾರಿ ಮನವಿದಶಕಗಳಿಂದ ಹದಗೆಟ್ಟಿರುವ ರಸ್ತೆ ಯನ್ನು ದುರಸ್ತಿಪಡಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ನಿರಂತರ ಮನವಿ ಮಾಡಿದರೂ ಈವರೆಗೂ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಅನುದಾನಕ್ಕೆ ಪ್ರಯತ್ನ
ಈಗಾಗಲೇ ಈ ರಸ್ತೆಯಲ್ಲಿರುವ ಕುಕ್ಕಿಲ ಸಮೀಪದ ಸೇಸ ಸುವರ್ಣ ಮನೆ ಬಳಿ ಸೇತುವೆಯನ್ನು ಕೇಂದ್ರ ರಸ್ತೆ ನಿಧಿ ಅನುದಾನದಿಂದ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲೇ ಈ ರಸ್ತೆಯ ಕಾಮಗಾರಿಗೆ ಶಾಸಕರ ಹಾಗೂ ಸಂಸದರ ನಿಧಿಯಿಂದ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಿ ರಸ್ತೆ ಅಭಿವೃದ್ಧಿಗೊಳಿಸಲಾಗುವುದು.
-ಸುಮಿತ್ ಶೆಟ್ಟಿ,ಜಿಲ್ಲಾ ಪಂಚಾಯತ್,ಸದಸ್ಯರು ಸಂಚಾರ ಅಸಾಧ್ಯ
ರಸ್ತೆ ಅತ್ಯಂತ ಹದಗೆಟ್ಟಿದ್ದು ಸಂಚಾರ ನಡೆಸುವುದೇ ಅಸಾಧ್ಯವಾಗಿದೆ. ಶೀಘ್ರ ಇದನ್ನು ದುರಸ್ತಿಗೊಳಿಸಿ ಈ ಭಾಗದ ಜನರಿಗೆ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಿಸಿಕೊಡುವಲ್ಲಿ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಸ್ಪಂದಿಸಬೇಕಾಗಿದೆ.
-ಮಹೇಂದ್ರ ಕಾಮತ್, ಕಂಬಳ ಕೋಡಿ,ಸ್ಥಳೀಯರು