ಬೆಂಗಳೂರು:ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ “ಹಾಯ್ ಬೆಂಗಳೂರು’ ವಾರ ಪತ್ರಿಕೆ ಸಂಪಾದಕ ರವಿಬೆಳಗೆರೆಗೆ ಷರತ್ತು ಬದ್ಧ ಜಾಮೀನು ನೀಡಿ 65ನೇ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ಗುರುವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ 65ನೇ ಸಿಟಿ ಸಿವಿಲ್ ಕೋರ್ಟ್‌ನ ನ್ಯಾ.ಮಧುಸೂದನ್ ಜಾಮೀನು ಮಂಜೂರು ಮಾಡಿದ್ದಾರೆ. ಇಬ್ಬರ ಶ್ಯೂರಿಟಿ, 2 ಲಕ್ಷ ಬಾಂಡ್, ಯಾವುದೇ ಸಂದರ್ಭದಲ್ಲಿಯೂ ಸಾûಾ$Âನಾಶ ಮಾಡಬಾರದು, ತನಿಖಾಧಿಕಾರಿಗಳ ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದ್ದಾರೆ.
ಇದಕ್ಕೂ ಮೊದಲು ಸರ್ಕಾರಿ ಅಭಿಯೋಜಕರು ವಾದ ಮಂಡಿಸಿ, ಅನಾರೋಗ್ಯ ಕಾರಣವೊಡ್ಡಿ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿಬೆಳಗೆರೆ ಜೈಲಿನಲ್ಲಿದ್ದ ವೇಳೆ ಅಮಾಯಕರಂತೆ ನಟಿಸಿ, ಅನಾರೋಗ್ಯ ನೆಪವೊಡ್ಡಿ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ ಜಾಮೀನು ನೀಡಬಾರದು ಎಂದು ವಾದಿಸಿದರು.
ಇದೇ ವೇಳೆ ವಾದಮಂಡಿಸಿದ ಸುನಿಲ್ ಹೆಗ್ಗರವಳ್ಳಿ ಪರ ವಕೀಲ ಹರೀಶ್, ಸೂಕ್ತ ಸಾûಾ$Âಧಾರಗಳ ಆಧಾರದ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ. ಜತೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೇ, ರವಿಬೆಳಗೆರೆ ಭೂಗತ ಜಗತ್ತಿನ ಜತೆ ನಂಟು ಹೊಂದಿದ್ದಾರೆ. ಹೀಗಾಗಿ ಬಿಡುಗಡೆಯಾಗಿ ಬಂದರೆ ನಮ್ಮ ಕಕ್ಷಿದಾರರ ಮೇಲೆ ಮತ್ತೆ ವೈಷಮ್ಯ ಸಾಧಿಸುತ್ತಾರೆ. ಹೀಗಾಗಿ ಆರೋಪಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಕೀಲ ದಿವಾಕರ್, ಸುನಿಲ್ ಹತ್ಯೆಗೆ ಆರೋಪಿಗಳು ಸಿದ್ಧತೆ ನಡೆಸಿದ್ದರು ಎಂದು ಪೊಲೀಸರು ಆರೋಪಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ಸೂಕ್ತ ಸಾûಾ$Âಧಾರಗಳಿಲ್ಲ. ಹೀಗಾಗಿ ಜಾಮೀನು ಮಂಜುರು ಮಾಡಬೇಕು ಎಂದು ವಾದಿಸಿದರು. ಇದನ್ನು ಪುರಸ್ಕರಿಸಿದ ನ್ಯಾ. ಮಧುಸೂದನ್ ಷರತ್ತು ಬದ್ಧ ಜಾಮೀನು ನೀಡಿ ಆದೇಶಿಸಿದ್ದಾರೆ.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರವಿಬೆಳಗೆರೆ ಪರ ವಕೀಲ ದಿವಾಕರ್, ಪೊಲೀಸ್ ವಶದಲ್ಲಿರುವ ವಿಜಯಪುರದ ಶಶಿಧರ್ ರಾಮಚಂದ್ರ ಮುಂಡೆವಾಡಿ ಹೇಳಿಕೆಯನ್ನಾಧರಿಸಿ ಎಫ್ಐಆರ್ ದಾಖಲಿಸಲಾಗಿಯೇ ಹೊರತು, ಇತರೆ ಸೂಕ್ತ ಸಾûಾ$Âಧಾರಗಳಿಲ್ಲ. ಹೀಗಾಗಿ ನನ್ನ ಕಕ್ಷಿದಾರರ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಜನವರಿಯಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.