Advertisement

ಡಿಕೆಶಿಗೆ ಜಾಮೀನು: ಹೆಬ್ಬಾಳ್ಕರ್ ಮನೆ‌ ಎದುರು ಸಂಭ್ರಮಾಚರಣೆ

09:50 AM Oct 24, 2019 | Team Udayavani |

ಬೆಳಗಾವಿ: ಅಕ್ರಮ ಹಣಗಳಿಕೆ ಹಾಗೂ ಪತ್ತೆ ಪ್ರಕರಣದಲ್ಲಿ ಇಡಿ(ಜಾರಿ ನಿರ್ದೇಶನಾಲಯ) ಬಂಧನದಲ್ಲಿದ್ದು, 48 ದಿನಗಳ ಕಾಲ ಜೈಲುವಾಸ ಅನುಭವಿಸಿದ ಕನಕಪುರ ಬಂಡೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗೆ ಬುಧವಾರ ಜಾಮೀನು ಮಂಜೂರಾಗುತ್ತಿದ್ದಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸದ ಎದುರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

Advertisement

ಶಿವಕುಮಾರ್ ಗೆ ಜಾಮೀನು ನೀಡಿ ದೆಹಲಿ ಹೈಕೋರ್ಟ್​ ಆದೇಶಿಸುತ್ತಿದ್ದಂತೆ ಡಿಕೆಶಿ ಹಾಗೂ ಹೆಬ್ಬಾಳ್ಕರ್ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ‌ ಸಂಭ್ರಮಿಸಿದರು. ನೆಚ್ಚಿನ ನಾಯಕನ ಆಗಮನಕ್ಕಾಗಿ ಕಾತರದಿಂದ‌ ಕಾಯುತ್ತಿರುವ ಇವರ ಬೆಂಬಲಿಗರಲ್ಲಿ ಸಂತಸ ಮನೆ ಮಾಡಿತ್ತು.

ಇನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯಲ್ಲೂ ಸಂಭ್ರಮ ಜೋರಾಗಿಯೇ ಇತ್ತು. ಬೆಳಗಾವಿಯ ಕುವೆಂಪು ನಗರದಲ್ಲಿರುವ ಹೆಬ್ಬಾಳ್ಕರ್​ ಮನೆ ಮುಂದೆ ಪಟಾಕಿ ಸಿಡಿಸಿದ ಬೆಂಬಲಿಗರು ಡಿಕೆ ಶಿವಕುಮಾರ್ ಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಜತೆಗೆ ನಗರದ ಚನ್ನಮ್ಮ ವೃತ್ತದಲ್ಲಿಯೂ ಹೆಬ್ಬಾಳ್ಕರ್ ಬೆಂಬಲಿಗರು ಸಿಹಿ ಹಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next