Advertisement
ಹೈಕೋರ್ಟ್ ನ ಏಕ ಸದಸ್ಯ ಪೀಠದಿಂದ ಜಾಮೀನು ಮಂಜೂರು ಮಾಡಿದ್ದು, ಆದೇಶದ ಪ್ರತಿ ಇನ್ನೂ ಕೈಗೆ ಸಿಗದ ಕಾರಣ ಆರ್ಯನ್ ಇಂದೂ ಜೈಲಿನಲ್ಲೇ ಉಳಿಯಬೇಕಾಗಿದೆ.
Related Articles
Advertisement
”3 ದಿನಗಳ ಕಾಲ ವಾದ ಆಲಿಸಿದ ನಂತರ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ವಿವರವಾದ ಆದೇಶವನ್ನು ನಾಳೆ ನೀಡಲಾಗುವುದು. ನಾಳೆ ಅಥವಾ ಶನಿವಾರದ ವೇಳೆಗೆ ಅವರೆಲ್ಲರೂ ಜೈಲಿನಿಂದ ಹೊರಬರುವ ವಿಶ್ವಾಸವಿದೆ” ಎಂದು ಮಾಜಿ ಅಡ್ವೋಕೇಟ್ ಜನರಲ್ ಮುಕುಲ್ ರೋಹಟಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಬಿಡುಗಡೆ ಪ್ರಕ್ರಿಯೆಗಳು ಪೂರ್ಣಗೊಂಡರೆ ಆರ್ಯನ್ ಗೆ ನಾಳೆ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ಸಿಗಲಿದೆ.