ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸತತವಾಗಿ ಜಾರಿ ನಿರ್ದೇಶನಾಲಯದ ಸಮನ್ಸ್ ಗೆ ಗೈರು ಹಾಜರಾಗಿ ಬಂಧನ ಭೀತಿ ಎದುರಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ದೆಹಲಿಯ ರೋಸ್ ಅವಿನ್ಯೂ ಕೋರ್ಟ್ ಶನಿವಾರ (ಮಾರ್ಚ್ 16) ಜಾಮೀನು ನೀಡಿದೆ.
ಇದನ್ನೂ ಓದಿ:IPL 2024: ಐಪಿಎಲ್‌ನ ದ್ವಿತೀಯಾರ್ಧದ ಪಂದ್ಯಗಳು ಭಾರತದಿಂದ ಸ್ಥಳಾಂತರ? -ವರದಿ
ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಜಾಮೀನಿಗೆ ಅರವಿಂದ್ ಕೇಜ್ರಿವಾಲ್ ಗೆ 15,000 ರೂ. ವೈಯಕ್ತಿಕ ಬಾಂಡ್ ಹಾಗೂ ಒಂದು ಲಕ್ಷ ರೂಪಾಯಿ ಸೆಕ್ಯುರಿಟಿ ಬಾಂಡ್ ನೀಡುವಂತೆ ಸೂಚಿಸಿತ್ತು.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಜಾರಿ ನಿರ್ದೇಶನಾಲಯದ ಸಮನ್ಸ್ ಗೆ ಸತತವಾಗಿ ಗೈರು ಹಾಜರಾಗಿರುವುದು ಐಪಿಸಿ ಸೆಕ್ಷನ್ 174ರ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ತಿಳಿಸಿದೆ.
ದೆಹಲಿ ಅಬಕಾರಿ ನೀತಿ ಹಗರಣದ ಕುರಿತು ಪ್ರಶ್ನಿಸಲು ಅರವಿಂದ್ ಕೇಜ್ರಿವಾಲ್ ಗೆ ಜಾರಿ ನಿರ್ದೇಶನಾಲಯ ಎಂಟು ಬಾರಿ ಸಮನ್ಸ್ ಜಾರಿಗೊಳಿಸಿತ್ತು. ಆದರೆ ಕೇಜ್ರಿವಾಲ್ ಎಂಟು ಸಮನ್ಸ್ ಗೂ ಗೈರು ಹಾಜರಾಗಿದ್ದರು ಎಂದು ಇ.ಡಿ ಕೋರ್ಟ್ ಗೆ ತಿಳಿಸಿತ್ತು.
ಪ್ರಕರಣದ ಕುರಿತು ಏಪ್ರಿಲ್ 1ರಂದು ನಡೆಯಲಿರುವ ಮುಂದಿನ ವಿಚಾರಣೆಗೆ ಅರವಿಂದ್ ಕೇಜ್ರಿವಾಲ್ ಖುದ್ದು ಹಾಜರಾಗಬೇಕಾಗಿಲ್ಲ ಎಂದು ಕೋರ್ಟ್ ಸೂಚನೆ ನೀಡಿದೆ.