Advertisement

ಕಾರಿನಲ್ಲಿ ಒಟ್ಟು 12 ಕ್ಯಾಮರಾಗಳು, 8 ಲಿಡಾರ್‌ಗಳನ್ನು ಅಳವಡಿಸಲಾಗಿದೆ: ಏನಿದರ ವಿಶೇಷ ?

09:30 AM Jul 22, 2022 | Team Udayavani |

ಬೀಜಿಂಗ್‌: ಚೀನಾದ ಬೈಡು ಸಂಸ್ಥೆಯು ಗುರುವಾರ ಸ್ಟೇರಿಂಗ್‌ ಇಲ್ಲದ ಕಾರೊಂದನ್ನು ಅನಾವರಣ ಮಾಡಿದೆ.

Advertisement

ದೇಶದಲ್ಲಿ ಮುಂದಿನ ವರ್ಷದಿಂದ ರೋಬೋಟ್ಯಾಕ್ಸಿ ಸೇವೆ ಆರಂಭವಾಗುವ ಸಾಧ್ಯತೆಯಿದ್ದು, ಅದೇ ನಿಟ್ಟಿನಲ್ಲಿ ಈ ಸ್ಟೇರಿಂಗ್‌ ಇಲ್ಲದ ಅಟೋನೊಮಸ್‌ ವಾಹನ(ಎವಿ) ಅನಾವರಣ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ.

ಕಾರನ್ನು ಮನುಷ್ಯರೇ ನಿಯಂತ್ರಿಸಬೇಕೆಂದರೆ ಅದಕ್ಕೆ ಸ್ಟೇರಿಂಗ್‌ ಹಾಕಿಕೊಳ್ಳುವ ಅವಕಾಶವನ್ನೂ ಕೊಡಲಾಗಿದೆ. ಕಾರಿನಲ್ಲಿ ಒಟ್ಟು 12 ಕ್ಯಾಮರಾಗಳು, 8 ಲಿಡಾರ್‌ಗಳನ್ನು ಅಳವಡಿಸಲಾಗಿದೆ. ಲಿಡಾರ್‌ಗಳು ರೆಡಾರ್‌ ಸೆನ್ಸಾರ್‌ಗಳಂತೆಯೇ ಕೆಲಸ ಮಾಡುವ ಸಾಧನವಾಗಿವೆ.

ಈ ಆಟೋಮೆಟಿಕ್‌ ಕಾರು 20 ವರ್ಷ ಅನುಭವವಿರುವ ಚಾಲಕ ಕಾರನ್ನು ಚಲಾಯಿಸಿದರೆ ಎಷ್ಟು ಸುರಕ್ಷಿತವಾಗಿ ಸಂಚರಿಸುತ್ತಾನೆಯೋ ಅಷ್ಟೇ ಸುರಕ್ಷಿತವಾಗಿ ಸಂಚರಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ಚೀನಾದಲ್ಲಿ ಸ್ಟೇರಿಂಗ್‌ ಇಲ್ಲದ ಕಾರನ್ನು ರಸ್ತೆಗಿಳಿಸುವುದಕ್ಕೆ ಅನುಮತಿಯಿಲ್ಲ. ಸದ್ಯದಲ್ಲೇ ಅದಕ್ಕೆ ಅನುಮತಿ ಸಿಗುವ ಸಾಧ್ಯತೆಯಿದ್ದು, ಆಗ ಈ ಕಾರುಗಳನ್ನು ರಸ್ತೆಗಿಳಿಸಲು ಸಂಸ್ಥೆ ಸಿದ್ಧತೆ ನಡೆಸಿಕೊಂಡಿದೆ.

Advertisement

ಅಂದಹಾಗೆ, ಈ ಕಾರಿನ ಬೆಲೆ 29.57 ಲಕ್ಷ ರೂ. ಸಂಸ್ಥೆಯು ಈ ಹಿಂದೆಯೇ ಒಂದು ಸ್ಟೇರಿಂಗ್‌ ಇಲ್ಲದ ಕಾರನ್ನು ಬಿಟ್ಟಿದ್ದು, ಈ ಕಾರಿನ ಬೆಲೆ ಹಳೆಯ ಕಾರಿಗಿಂತ ಕಡಿಮೆಯಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next