Advertisement

ಸಿಂಧು, ಲಕ್ಷ್ಯ ಸೇನ್‌ಗೆ ತಲಾ 20 ಲಕ್ಷ ರೂ.: ಪದಕ ವಿಜೇತರಿಗೆ ನಗದು ಬಹುಮಾನ ಪ್ರಕಟಿಸಿದ ಬಿಎಐ

12:01 AM Sep 07, 2022 | Team Udayavani |

ಹೊಸದಿಲ್ಲಿ: ಕಾಮನ್ವೆಲ್ತ್‌ ಗೇಮ್ಸ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತೀಯ ಆಟಗಾರರಿಗೆ ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ (ಬಿಎಐ) 1.5 ಕೋಟಿ ರೂ. ಮೊತ್ತದ ನಗದು ಬಹುಮಾನವನ್ನು ಪ್ರಕಟಿಸಿದೆ.

Advertisement

ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ ಹಾಗೂ 2021 ಮತ್ತು 2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಆಟಗಾರರು ಶ್ರೇಷ್ಠ ನಿರ್ವಹಣೆ ದಾಖಲಿಸಿದ್ದರು. ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚು ಪಡೆದಿದ್ದರೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೂರು ಪದಕ ಗೆದ್ದುಕೊಂಡಿದ್ದಾರೆ.

ನಮ್ಮ ಬ್ಯಾಡ್ಮಿಂಟನ್‌ ಆಟಗಾರರು ಸ್ಥಿರವಾದ ನಿರ್ವಹಣೆ ನೀಡಿ ಪದಕ ಗೆಲ್ಲುತ್ತ ಬರುತ್ತಿದ್ದಾರೆ. ಈ ನಗದು ಬಹುಮಾನವು ಕಳೆದ ಎರಡು ವರ್ಷಗಳಲ್ಲಿ ಅವರು ನೀಡಿದ ಅಮೋಘ ಸಾಧನೆಗೆ ಪುಟ್ಟ ಕಾಣಿಕೆ ಎಂದು ಬಿಎಐ ಅಧ್ಯಕ್ಷ ಡಾ| ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ 10 ಸದಸ್ಯರ ಮಿಕ್ಸೆಡ್‌ ತಂಡವು ಒಟ್ಟಾರೆ 30 ಲಕ್ಷ ರೂ. (ಪ್ರತಿಯೊಬ್ಬರಿಗೆ ತಲಾ 3 ಲಕ್ಷ ರೂ.) ಪಡೆಯಲಿದ್ದರೆ 8 ಸದಸ್ಯರ ಬೆಂಬಲ ಸಿಬಂದಿ ತಲಾ 1.5 ಲಕ್ಷ ರೂ. ಪಡೆಯಲಿದ್ದಾರೆ.

ಸಿಂಗಲ್ಸ್‌ ಚಾಂಪಿಯನ್‌ಗಳಾದ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್‌ ತಲಾ 20 ಲಕ್ಷ ರೂ. ಪಡೆಯಲಿದ್ದರೆ ಐತಿಹಾಸಿಕ ಚಿನ್ನ ಗೆದ್ದ ಡಬಲ್ಸ್‌ ಆಟಗಾರರಾದ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ 25 ಲಕ್ಷ ರೂ. ಪಡೆಯಲಿದ್ದಾರೆ.

Advertisement

ಚಿನ್ನ ಗೆದ್ದವರು ಮಾತ್ರವಲ್ಲದೇ ಚೊಚ್ಚಲ ಬಾರಿ ಕಂಚಿನ ಪದಕ ಗೆದ್ದ ವನಿತಾ ಡಬಲ್ಸ್‌ ಆಟಗಾರ್ತಿಯರಾದ ಗಾಯತ್ರಿ ಗೋಪಿಚಂದ್‌ ಮತ್ತು ಟ್ರೀಸಾ ಜಾಲಿ 7.5 ಲಕ್ಷ ರೂ. ಪಡೆಯಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕಂಚು ಪಡೆದ ಕಿದಂಬಿ ಶ್ರೀಕಾಂತ್‌ 5 ಲಕ್ಷ ರೂ. ಪಡೆಯಲಿದ್ದಾರೆ. ಅವರು 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆಗಾಗಿ 10 ಲಕ್ಷ ರೂ. ಪಡೆಯಲಿದ್ದಾರೆ.

2021ರ ವಿಶ್ವ ಚಾಂಪಿಯನ್‌ಶಿಪ್‌ನ ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದ ಸೆನ್‌ ಮತ್ತೆ 5 ಲಕ್ಷ ರೂ. ಪಡೆದರೆ ಕಳೆದ ತಿಂಗಳು ಟೋಕಿಯೋದಲ್ಲಿ ಮುಗಿದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರಡಬಲ್ಸ್‌ನಲ್ಲಿ ಕಂಚು ಗೆದ್ದ ಭಾರತದ ಮೊದಲ ಜೋಡಿಯಾದ ಚಿರಾಗ್‌ ಮತೆತು ಸಾತ್ವಿಕ್‌ ಮತ್ತೆ 7.5 ಲಕ್ಷ ರೂ. ಪಡೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next