Advertisement

ಬಹುಗ್ರಾಮ ಯೋಜನೆಯಿಂದ ಬಹು ಕ್ಷೇತ್ರಗಳಿಗೆ ನೀರು!

02:36 AM Oct 07, 2022 | Team Udayavani |

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ 15 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಒಟ್ಟು 73.10 ಕೋ.ರೂ.ಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ದ.ಕ. ಜಿಲ್ಲೆಯಲ್ಲಿ ಒಂದೇ ಬಹುಗ್ರಾಮ ಯೋಜನೆ ಯಿಂದ ಮೂರು ಕ್ಷೇತ್ರಗಳ ಗ್ರಾಮೀಣ ಭಾಗಕ್ಕೆ ನೀರು ಸಿಗುತ್ತಿರುವುದು ಇದೇ ಮೊದಲು.

Advertisement

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಂಗಳೂರು ವಿಭಾಗದಿಂದ ಜಲಜೀವನ್‌ ಮಿಷನ್‌ ಯೋಜನೆ-2215 ಎಂವಿಎಸ್‌ ಮೂಲಕ ಅನು ಷ್ಠಾನಗೊಳ್ಳುವ ಈ ಯೋಜನೆಗೆ ಉಳಾçಬೆಟ್ಟು ಮತ್ತು ಬಂಟ್ವಾಳ ಇತರ 132 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎಂಬ ಹೆಸರನ್ನು ಇಡಲಾಗಿದೆ.

ಬಂಟ್ವಾಳ ಹಾಗೂ ಮಂಗಳೂರು ಉತ್ತರ ಕ್ಷೇತ್ರಕ್ಕೆ ತಲಾ 26.58 ಕೋ.ರೂ., ಮಂಗಳೂರು ಕ್ಷೇತ್ರಕ್ಕೆ 19.94 ಕೋ.ರೂ. ಮೀಸಲಿಡಲಾಗಿದೆ. 18 ತಿಂಗಳಲ್ಲಿ ಯೋಜನೆ ಪೂರ್ತಿಗೊಳ್ಳಲಿದ್ದು, ಮುಗ್ರೋಡಿ ಕನ್‌ಸ್ಟ್ರಕ್ಷನ್ಸ್‌ ಕಾಮಗಾರಿ ನಿರ್ವಹಿಸಲಿದೆ.

92,174 ಫಲಾನುಭವಿಗಳು
ಯೋಜನೆಯು ಒಟ್ಟು 92,174 ಮಂದಿ ಫಲಾನುಭವಿಗಳನ್ನು ತಲುಪಲಿದ್ದು, ಬಂಟ್ವಾಳದ 51 ಜನವಸತಿ ಪ್ರದೇಶದ 22,708, ಮಂಗಳೂರು ಕ್ಷೇತ್ರದ 34 ಜನವಸತಿ ಪ್ರದೇಶದ 27,751 ಹಾಗೂ ಮಂಗಳೂರು ಉತ್ತರದ 47 ಜನವಸತಿ ಪ್ರದೇಶದ 41,679 ಮಂದಿಗೆ ನೀರನ್ನೊದಗಿಸುವ ಗುರಿ ಹೊಂದಲಾಗಿದೆ.

15 ಗ್ರಾಮಗಳಿಗೆ ಯೋಜನೆ
ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವ ಯೋಜನೆ ಯಲ್ಲಿ ಬಂಟ್ವಾಳದ ಕ್ಷೇತ್ರದ 5 ಗ್ರಾ.ಪಂ.ಗಳ ಅಮ್ಮುಂಜೆ, ಬಡಗಬೆಳ್ಳೂರು, ತೆಂಕಬೆಳ್ಳೂರು, ಕರಿಯಂಗಳ, ಕಳ್ಳಿಗೆ ಗ್ರಾಮಗಳು, ಮಂಗಳೂರು ಕ್ಷೇತ್ರದ 3 ಗ್ರಾ.ಪಂ.ಗಳ ಪುದು, ಕೊಡಾ¾ಣ್‌, ಮೇರಮಜಲು, ತುಂಬೆ ಗ್ರಾಮಗಳು, ಮಂಗ ಳೂರು ಉತ್ತರ ಕ್ಷೇತ್ರದ 4 ಗ್ರಾ.ಪಂ.ಗಳ ಅಡ್ಯಾರ್‌, ಅರ್ಕುಳ, ಮಲ್ಲೂರು, ಬೊಂಡಂತಿಲ, ನೀರುಮಾರ್ಗ, ಉಳ್ಳಾಯಿಬೆಟ್ಟು ಹೀಗೆ ಒಟ್ಟು 15 ಗ್ರಾಮ(11 ಗ್ರಾ.ಪಂ.)ಗಳ ಒಟ್ಟು 132 ಜನವಸತಿ ಪ್ರದೇಶಗಳಿಗೆ ನೀರು ತಲುಪಲಿದೆ.

Advertisement

ಬೆಂಜನಪದವಿನಲ್ಲಿ ಮುಖ್ಯ ಟ್ಯಾಂಕ್‌
ಯೋಜನೆಗೆ ಬೇಕಾಗುವ 5.60 ಎಂಎಲ್‌ಡಿ ನೀರನ್ನು ನೇತ್ರಾವತಿ ನದಿಯ ತುಂಬೆ ಮನಪಾ ಅಣೆಕಟ್ಟಿನಿಂದ ರಾಮಲ್‌ಕಟ್ಟೆ ಘಟಕದ ಮೂಲಕ ಮೇಲೆತ್ತಿ ಬೆಂಜನಪದವು ರಾಮನಗರದ ಎತ್ತರ ಪ್ರದೇಶದಲ್ಲಿ ನಿರ್ಮಾಣಗೊಳ್ಳುವ 5.50 ಲಕ್ಷ ಲೀ. ಸಾಮರ್ಥ್ಯದ ಮೇಜರ್‌ ಬ್ಯಾಲೆನ್ಸಿಂಗ್‌ ಟ್ಯಾಂಕ್‌ (ಎಂಬಿಟಿ)ಗೆ ತುಂಬಿಸಿ ಬಳಿಕ 9 ಝೋನಲ್‌ ಬ್ಯಾಲೆನ್ಸಿಂಗ್‌ ಟ್ಯಾಂಕ್‌(ಝಡ್‌ಬಿಟಿ)ಗಳಿಗೆ ಪೂರೈಸಲಾಗುತ್ತದೆ.

ಯೋಜನೆಯಲ್ಲಿ 3 ಕ್ಷೇತ್ರಗಳ 15 ಗ್ರಾಮದ 132 ಜನವಸತಿ ಪ್ರದೇಶಗಳಿಗೆ ಬೇಕಾದ ಒಟ್ಟು 5.60 ಎಂಎಲ್‌ಡಿ ನೀರನ್ನು ನೇತ್ರಾವತಿ ನದಿಯಿಂದ ರಾಮಲ್‌ಕಟ್ಟೆಯ ನೀರು ಶುದ್ಧೀಕರಣ ಘಟಕದಿಂದ ಪಡೆಯಲಾಗುತ್ತದೆ. ಸಾಕಷ್ಟು ಬಹುಗ್ರಾಮ ನೀರಿನ ಯೋಜನೆಗಳು ಅನುಷ್ಠಾನಗೊಂಡಿದ್ದು, ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳನ್ನು ಒಳಗೊಂಡ ಯೋಜನೆ ಇದೇ ಮೊದಲಾಗಿದೆ.
– ನರೇಂದ್ರಬಾಬು ಕಾರ್ಯಪಾಲಕ ಎಂಜಿನಿಯರ್‌, ಗ್ರಾ.ಕು.ನೀ.ಹಾಗೂ ನೈ.ಇಲಾಖೆ ಮಂಗಳೂರು ವಿಭಾಗ

–  ಕಿರಣ್‌ ಸರಪಾಡಿ

 

Advertisement

Udayavani is now on Telegram. Click here to join our channel and stay updated with the latest news.

Next