Advertisement

ಬಾಹುಬಲಿ-2 ಕನ್ನಡಕ್ಕೆ ಡಬ್‌ ಆಗುತ್ತಾ?

11:03 AM Feb 21, 2017 | |

ತೆಲುಗಿನ ಬಹು ನಿರೀಕ್ಷಿತ ಚಿತ್ರ “ಬಾಹುಬಲಿ-2′ ಕನ್ನಡದಲ್ಲಿ ಡಬ್ಬಿಂಗ್‌ ಆಗಲಿದೆಯಾ? ಹಾಗೊಂದು ಸೂಚನೆ ನೀಡಿದ್ದಾರೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ. “ಈ ಕುರಿತು ಚಿತ್ರದ ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್‌ ಅವರ ಬಳಿ ಮಾತಾಡಿದ್ದೇವೆ. ನೀವಾದರೂ ಡಬ್‌ ಮಾಡಿ, ಇಲ್ಲವೇ ನಮಗಾದರೂ ಡಬ್ಬಿಂಗ್‌ಗೆ ಅವಕಾಶ ಕೊಡಿ ಎಂದು ಕೇಳಿದ್ದೇವೆ.

Advertisement

ಅದಕ್ಕೆ ಪ್ರತಿಯಾಗಿ, ಅವರು ನಮ್ಮ ವಿವರ ಪಡೆದಿದ್ದು, ಡಬ್ಬಿಂಗ್‌ ಹಕ್ಕುಗಳನ್ನು ಕೊಡುವ ಬಗ್ಗೆ ಚಿಂತನೆಯಲ್ಲಿದ್ದಾರೆ. ಈಗಾಗಲೇ ಚಿತ್ರದ ಪ್ರದರ್ಶನದ ಹಕ್ಕುಗಳನ್ನು ಕರ್ನಾಟಕದ ವಲಯಕ್ಕೆ ದೊಡ್ಡ ಮೊತ್ತಕ್ಕೆ ಕೊಟ್ಟಿರುವ ಕಾರಣ, ಡಬ್ಬಿಂಗ್‌ ಹಕ್ಕು ಕೊಡುವ ಬಗ್ಗೆ ಅವರು ಹಿಂದೇಟು ಹಾಕುತ್ತಿರಬಹುದು. ಡಬ್ಬಿಂಗ್‌ ಹಕ್ಕು ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ನಿಟ್ಟಿನಲ್ಲಿ ಅವರನ್ನು ಸಂಪರ್ಕಿಸಿರುವುದು ಹೌದು’ ಎಂದು ಕೃಷ್ಣೇಗೌಡ ಒಪ್ಪಿಕೊಳ್ಳುತ್ತಾರೆ.

ಈ ಹಿಂದೆ ಕರ್ನಾಟಕ ಡಬ್ಬಿಂಗ್‌ ಚಲನಚಿತ್ರ ವಾಣಿಜ್ಯ ಮಂಡಳಿ ಎಂದು ನಾಮಕರಣಗೊಂಡಿದ್ದ ವಾಣಿಜ್ಯ ಮಂಡಳಿಯನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂದು ಹೆಸರು ಬದಲಾಯಿಸಿದ್ದಕ್ಕೆ ಕಾರಣ ನೀಡಿದ ಅವರು, “ನಮ್ಮ ಮಂಡಳಿಯ ಸದಸ್ಯರು, ನಾವು ಮಾಡುತ್ತಿರುವುದು ಕನ್ನಡದ ಕೆಲಸವಾಗಿರುವುದರಿಂದ ಡಬ್ಬಿಂಗ್‌ ಪದವನ್ನು ಬಿಟ್ಟು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂಬ ಹೆಸರಿಡುವಂತೆ ಸೂಚಿಸಿದ್ದರಿಂದ ಅದೇ ಹೆಸರನ್ನು ಖಾಯಂಗೊಳಿಸಲಾಯಿತು’ ಎಂದು ಅವರು ಸ್ಪಷ್ಟಪಡಿಸುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next