Advertisement
ಕನ್ನಡಿಗ ಚರಣ್ ಅಕ್ಷಯ್ ರವರು ಸಾಹಸಕ್ಕೆ ಕೈ ಹಾಕಿದ್ದು, ಚಿತ್ರವು ಅಕ್ಟೋಬರ್ 27ರಂದು ಇಲ್ಲಿನ ಮನಾಮದಲ್ಲಿರುವ ಅಲ್ ಹಮ್ರಾ ಚಿತ್ರ ಮಂದಿರದಲ್ಲಿ ಮಧ್ಯಾಹ್ನ 2.30ಕ್ಕೆ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. ಸ್ನೇಹಿತರ ಗಾಢ ಸ್ನೇಹದ ಜೊತೆಗೆ ಕನ್ನಡ ನಾಡು,ನುಡಿಯ ಬಗ್ಗೆ ಇರುವ ಕಾಳಜಿಯ ಎಳೆಯೊಂದನ್ನು ಇಟ್ಟುಕೊಂಡು ಮಾಡಿರುವ ಚಿತ್ರವನ್ನು ಚರಣ್ ಅಕ್ಷಯ್ ರವರು ನಿರ್ಮಿಸಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Related Articles
Advertisement
ಈ ಚಿತ್ರವು ಗುಣಮಟ್ಟದಲ್ಲಿ ಯಾವುದೇ ರಾಜಿಮಾಡಿಕೊಳ್ಳದೆ ವೃತ್ತಿಪರ ತಂತ್ರಜ್ಞರು ದ್ವೀಪದಲ್ಲಿ ಮಾಡಿರುವ ಪ್ರಪ್ರಥಮ ಕನ್ನಡ ಚಲನಚಿತ್ರ ವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ . ಈ ಚಿತ್ರದ ಬಗ್ಗೆ ಈಗಾಗಲೇ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದು ಚಿತ್ರದ ಯಶಸ್ಸಿಗೆ ಕನ್ನಡ ಚಲನಚಿತ್ರರಂಗದ ನಟ ,ನಟಿಯರು ,ಗಾಯಕ ಗಾಯಕಿಯರು ,ಸಂಗೀತ ನಿರ್ದೇಶಕರು ಶುಭ ಹಾರೈಸಿದ್ದಾರೆ . 435 ಆಸನಗಳಿರುವ “ಮನಮಾ”ದಲ್ಲಿರುವ ಬ್ರಹತ್ ಚಿತ್ರ ಮಂದಿರದಲ್ಲಿ ಈ ಚಿತ್ರ ತೆರೆಕಾಣಲಿದ್ದು ಪ್ರೀಮಿಯರ್ ಪ್ರದರ್ಶನದ ಬಹುತೇಕ ಟಿಕೇಟುಗಳು ಇದಾಗಲೇ ಮುಂಗಡವಾಗಿ ಮಾರಾಟವಾಗಿದೆ . ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಚಿತ್ರ ನಿರ್ಮಾಪಕ ಚರಣ್ ಅಕ್ಷಯ್ ರವರನ್ನು ದೂರವಾಣಿ ಸಂಖ್ಯೆ 00973 38006315 ಮೂಲಕ ಸಂಪರ್ಕಿಸಬಹುದು.
ವರದಿ: ಕಮಲಾಕ್ಷ ಅಮೀನ್