ಮನಮಾ : ಬಹರೇನ್ ಕನ್ನಡ ಸಂಘದಲ್ಲಿ ಸಂಘದ ಯಕ್ಷಗಾನ ಸದಸ್ಯರಿಂದ ಸೆ. 29 ರಂದು(ಶನಿವಾರ) ಯಕ್ಷ ವೈಭವ 2023 ಕಾರ್ಯಕ್ರಮ ನಡೆಯಲಿದೆ.
ನಾಟ್ಯಗುರು, ಖ್ಯಾತ ಕಲಾವಿದ ದೀಪಕ್ ರಾವ್ ಪೇಜಾವರ ಅವರ ನಿರ್ದೇಶನದಲ್ಲಿ ಶ್ರೀಕೃಷ್ಣ ಲೀಲಾಮೃತ(ಪೂತನಿ ಸಂಹಾರ – ಕಾಳಿಂಗಮರ್ದನ – ಶಕಟಾದಿ ವಧೆ – ಕಂಸ ವಧೆ) ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕನ್ನಡ ಭವನದ ಯಕ್ಷಗಾನ ಕೇಂದ್ರದಲ್ಲಿ ಪ್ರದರ್ಶನದ ಪೂರ್ವತಯಾರಿ ಮುಹೂರ್ತ ಪೂಜೆ ನೆರವೇರಿಸಲಾಯಿತು. ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿರುವ ಯಕ್ಷಗಾನ ಪ್ರದರ್ಶನದ ಪೋಸ್ಟರ್ ಬಿಡುಗಡೆಯೂ ಈ ಸಂದರ್ಭದಲ್ಲಿ ನೆರವೇರಿತು.
ನಾಟ್ಯಗುರು ದೀಪಕ್ ರಾವ್ ಪೇಜಾವರ, ಸಂಘದ ಹಿರಿಯ ಸದಸ್ಯರಾದ ನಾಗೇಶ್ ಶೆಟ್ಟಿ , ರಮೇಶ್ ರಾಮಚಂದ್ರನ್, ಅತಿಥಿ ಭಾಗವತ ರೋಶನ್ ಎಸ್.ಕೋಟ್ಯಾನ್(ಸೌದಿ ಅರೇಬಿಯ), ಹಿರಿಯ ಕಲಾವಿದರಾದ ಮೋಹನ್ ಎಡನೀರು ಧನಂಜಯ ಕಿನ್ನಿಗೋಳಿ, ಸಂಘದ ಪದಾಧಿಕಾರಿಗಳು ಪೋಸ್ಟರ್ ಬಿಡುಗಡೆ ಮಾಡಿ ಯಕ್ಷ ವೈಭವಕ್ಕೆ ಶುಭಹಾರೈಸಿದರು.
ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ನೆರೆದ ಕಲೋಪಾಸಕ ಬಂಧುಗಳನ್ನು ಸ್ವಾಗತಿಸಿ ಈ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವನ್ನು ವಿನಂತಿಸಿ,ಧನ್ಯವಾದ ಸಮರ್ಪಣೆ ಮಾಡಿದರು.