Advertisement
2012ರಲ್ಲಿ ಶಾಲೆಯ ಮುಖ್ಯ ಪಿ.ಚಲುವ ನಾರಾಯಣಸ್ವಾಮಿ ಅವರು ತಮ್ಮ ಶಾಲಾ ಆವರಣ ದಲ್ಲಿ 50 ಗಿಡವನ್ನು ನೆಡುವ ಮೂಲಕ ಪರಿಸರ ಉಳಿವಿಗೆ ಮುಂದಾದರು. ಗಿಡಗಳು ಉತ್ತಮವಾಗಿ ಬೆಳೆದವು ಇದರಿಂದ ಪ್ರೇರೇಪಣೆಗೊಂಡ ಮುಖ್ಯ ಶಿಕ್ಷಣ 2013ರಲ್ಲಿ 130 ಗಿಡವನ್ನು ನೆಟ್ಟು ಶಾಲೆ ವಿದ್ಯಾರ್ಥಿಗಳ ಸಂಸದರನ್ನಾಗಿ ಮಾಡಿ ಪ್ರತಿ ತಂಡಕ್ಕೆ ಇಂತಿಷ್ಟು ಗಿಡವನ್ನು ನೀಡಿ ಅವುಗಳನ್ನು ಪೋಷಣೆ ಮಾಡುವ ಜವಾಬ್ದಾರಿ ನೀಡಿದರು.
Related Articles
Advertisement
ಶಾಲೆಯ ಅಭಿವೃದ್ಧಿ ಅಚ್ಚರಿ: ನಿರ್ಜನ ಪ್ರದೇಶದಲ್ಲಿ ಇದ್ದ ಶಾಲೆ, ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾಣು ತ್ತಿದೆ. ಪಾಲಕರೂ ಇಲ್ಲಿನ ವಾತಾವರಣದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಹೊಸದಾಗಿ ನಾಲ್ಕು ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ, ಇಂಗ್ಲಿಷ್ ಹಾಗೂ ಕನ್ನಡ ಭಾಷೆ ಎರಡರಲ್ಲೂ ಶಿಕ್ಷಣ ನೀಡ ಲಾಗುತ್ತಿದ್ದು, ಎಲ್ಲಾ ರೀತಿಯ ಸೌಕರ್ಯ ಹೊಂದಿ ರುವ ಶಾಲೆ ಇದಾಗಿದೆ. ಈ ಭಾಗದ ಮಾದರಿ ಶಾಲೆ ಎಂದರೆ ತಪ್ಪಾಗಲಾರದು. ಖಾಸಗಿ ಶಾಲೆಗೆ ಸಡ್ಡು ಹೊಡೆಯುವ ರೀತಿಯಲ್ಲಿ ಸರ್ಕಾರಿ ಶಾಲೆ ಬಳೆದು ನಿಂತಿರುವುದು ತಾಲೂಕಿನ ಮಟ್ಟಿಗೆ ಹೆಮ್ಮೆಯ ಸಂಗತಿಯಾಗಿದೆ.
ಫೇಸ್‌ಬುಕ್ ಪೇಜ್ ಹೊಂದಿರುವ ಶಾಲೆ: ಸರ್ಕಾರಿ ಶಾಲೆಗಳು ಪ್ರಚಾರದ ಕೊರತೆಯಿಂದ ಸೊರಗುತ್ತಿವೆ ಇದನ್ನು ಅರಿತ ಶಾಲೆ ಮುಖ್ಯ ಶಿಕ್ಷಣ ಪಿ.ಚಲುವನಾರಾಯಣಸ್ವಾಮಿ ಜಿಎಚ್ಎಸ್ ಬಾಗೂರು ಸಿಎನ್‌ಸ್ ಕ್ರಿಯೇಷನ್ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಪೇಜ್ ತೆರೆದು ಶಾಲೆಯಲ್ಲಿ ಪ್ರತಿ ತಿಂಗಳು ನಡೆಯುವ ಪಠ್ಯೇತರ ಚಟುವಟಿಕೆಯನ್ನು ಅಪ್‌ಲೋಡ್ ಮಾಡುವುದನ್ನು ರೂಢಿಸಿಕೊಂಡಿದ್ದರು. ಇದರೊಂದಿಗೆ ಕೈ ತೋಟದಲ್ಲಿ ಮಕ್ಕಳು ಮಾಡುವ ಕೆಲಸವನ್ನು ಅಪ್‌ಲೋಡ್ ಮಾಡುವ ಮೂಲಕ ವಿದ್ಯಾರ್ಥಿಗಳ ಶ್ರಮದಾನವನ್ನು ಸಮಾಜಕ್ಕೆ ತಿಳಿಸಿದ್ದಾರೆ.
ಅಕ್ಷರ ದಾಸೋಹ ಅಧಿಕಾರಿಯಾಗಿ ವರ್ಗಾವಣೆ: ಶಾಲೆಯ ಸಾಕಷ್ಟು ಏಳಿಗೆಗೆ ಶ್ರಮಿಸಿದ ಮುಖ್ಯ ಶಿಕ್ಷಣ ಪಿ.ಚಲುವನಾರಾಯಣ ಸ್ವಾಮಿ ಅವರನ್ನು ಈಗ್ಗೆ 19 ದಿವಸದ ಹಿಂದೆ ಜೂ.1 ರಂದು ಅಕ್ಷರ ದಾಸೋಹ ಸಹಾಯ ನಿರ್ದೇಶಕರಾಗಿ ಸರ್ಕಾರ ಆದೇಶ ಹೊರಡಿಸಿ ವರ್ಗಾವಣೆ ಮಾಡಿದ್ದರಿಂದ ಅಕ್ಷರ ದಾಸೋಹ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
● ಶಾಮಸುಂದರ್ ಕೆ ಅಣ್ಣೇನಹಳ್ಳಿ